ಹೃದಯ ಸಮಸ್ಯೆಯಲ್ಲಿ ಬಳಲುತ್ತಿರುವ ನಯನಾಗಾಗಿ ಹೂ ಮಾರಿದ ಹೂವೆ ಹೂವೆ “ಪ್ರಿಯಾಂಕಾ ಉಪೇಂದ್ರ”

Published on

305 Views

ಕಳೆದ ವಾರದ “ಸದಾ ನಿಮ್ಮೊಂದಿಗೆ” ಸಂಚಿಕೆಯಲ್ಲಿ “ಧನಂಜಯ್” ಅವರು ರವಿ ಎಂಬ ಮೀನುಗಾರರ ಕುಟುಂಬದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೂಸಂಬಿ ಜ್ಯೂಸ್ ಮಾರಿ 1ಲಕ್ಷದ 30ಸಾವಿರ ರೂಗಳನ್ನು ನೀಡಿ ನೆರವಾಗಿದ್ದಾರೆ.

ಅದೇ ರೀತಿ ಈ ಭಾನುವಾರ ಬೆಂಗಾಲಿ ಬೆಡಗಿ ಪ್ರಿಯಾಂಕ ಉಪೇಂದ್ರ ಅವರು ಪುಷ್ಪಲತಾ ಗೋಸ್ಕರ ಗಾಂಧಿ ಬಜಾರಲ್ಲಿ ಹೂ ವ್ಯಾಪಾರ ಮಾಡಿದ್ದಾರೆ. ಇವರಿಗೆ 4 ಜನ ಹೆಣ್ಣುಮಕ್ಕಳಿದ್ದು ತುಂಬಾ ಬಡತದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಕೊನೆಯ ಮಗಳಿಗೆ ಹೃದಯದಲ್ಲಿ ಸಮಸ್ಯೆ ಎದುರಾಗಿದೆ. ಈ ಬಡತನದ ಮಧ್ಯೆ ಇದಕ್ಕು ಅವರು ಕಷ್ಟಪಡುವಂತಾಗಿದೆ. ಇವರ ಕಷ್ಟಕ್ಕೆ ಕೈ ಜೋಡಿಸಿದ್ದು ಪ್ರಿಯಾಂಕ ಉಪೇಂದ್ರ. ಇವರು ಹೂ ಮಾರಾಟ ಮಾಡಿ ಎಷ್ಟು ಸಂಪಾದನೆ ಮಾಡಿದ್ರು, ಆ ಹಣದಿಂದ ಪುಷ್ಪಲತಾ ಅವರ ಮಗಳ ಚಿಕಿತ್ಸೆಗೆ ಎಷ್ಟು ಉಪಯೋಗವಾಗುತ್ತೆ? ಎಂಬುದನ್ನು ಕಾದುನೋಡಬೇಕಾಗಿದೆ.

“ಸದಾ ನಿಮ್ಮೋಂದಿಗೆ” ಇದೇ ಭಾನುವಾರ (19.08.18) ನಿಮ್ಮ ಉದಯ ವಾಹಿನಿಯಲ್ಲಿ ರಾತ್ರಿ 9ಕ್ಕೆ ಪ್ರಸಾರವಾಗುತ್ತದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com