ಆಕ್ಷನ್ ಮೂಡ್ ಗೆ ಬಂದ ಪ್ರಿಯಾಂಕಾ ಉಪೇಂದ್ರ…

Published on

394 Views

ಲಾಕ್‌ಡೌನ್‌ ಪರಿಣಾಮಕ್ಕೆ ಚಲನಚಿತ್ರೋದ್ಯಮವು ಹೊರತಾಗಿರಲಿಲ್ಲ. ಹಲವಾರು ಚಿತ್ರದ ಚಿತ್ರೀಕರಣ ಸ್ಥಗಿತಗೊಳ್ಳಬೇಕಾಯಿತು. ಈಗ ಚಿತ್ರೀಕರಣವನ್ನು ಪುನರಾರಂಭಿಸುವುದರೊಂದಿಗೆ ಸಹಜ ಸ್ಥಿತಿಗೆ ಮರಳುತ್ತಿದೆ ಚಿತ್ರರಂಗ.

ಆ ಲಿಸ್ಟ್ ನಲ್ಲಿರುವ ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಉಗ್ರಾವತಾರ’ ಸಿನಿಮಾ ಕೂಡ ಒಂದು. ಈ ಚಿತ್ರದ ಚಿತ್ರೀಕರಣದಲ್ಲಿ ಮತ್ತೆ ಭಾಗವಹಿಸಲು ಉತ್ಸುಕರಾಗಿದ್ದಾರೆ ಪ್ರಿಯಾಂಕಾ ಉಪೇಂದ್ರ. ‘ಉಗ್ರಾವತಾರ’ ಚಿತ್ರತಂಡ ಚಿತ್ರೀಕರಣ ಪ್ರಾರಂಭಿಸಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿಯಾಗಿ ಪ್ರಿಯಾಂಕರವರು ನಟಿಸುತ್ತಿದ್ದು, ಆಕ್ಷನ್ ಮೂಡ್‌ಗೆ ಬಂದಿದ್ದಾರೆ.

“ನಾವು ಕೆಲವೊಂದು ಸ್ಥಳಗಳಲ್ಲಿ ಚಿತ್ರೀಕರಣ ಮಾಡುತ್ತಿರುವುದರಿಂದ ಸುರಕ್ಷತೆಯಿಂದ ಚಿತ್ರೀಕರಣ ದಲ್ಲಿ ಪಾಲ್ಗೊಂಡಿದ್ದೇವೆ. ಈ “ಚಿತ್ರದಲ್ಲಿ 50% ಭಾಗಗಳನ್ನು ಚಿತ್ರೀಕರಣ ಮುಗಿಸಿದ್ದಾರೆ. ಡೈಲಾಗ್ ಗಳು ಚೆನ್ನಾಗಿದೆ. ಹೊಸ ನಟರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯಿದೆ. ಅವರೊಂದಿಗೆ ಕೆಲಸ ಮಾಡುವುದು ಮತ್ತು ಅವರ ಕಥೆಗಳನ್ನು ಕೇಳುವುದು ಹೊಸ ಅನುಭವ ಕೊಟ್ಟಿದ್ದೆ.

ಉದಾಹರಣೆಗೆ, ಟಗರು ಖ್ಯಾತಿಯ ಸುಧಿ ಅಥವಾ ಜಿರಳೆ ಒಬ್ಬ ಪ್ರತಿಭಾವಂತ ನಟ ಮತ್ತು ಅವರು ಉಪೇಂದ್ರರಿಂದ ಹೇಗೆ ಪ್ರೇರಿತರಾಗಿದ್ದಾರೆಂದು ಸುಧಿ(ಜಿರಳೆ) ಹೇಳುತ್ತಿದ್ದರು. ಹೀಗೇ ನಾವೆಲ್ಲರೂ ಶೂಟಿಂಗ್ ‌ಸೆಟ್ ಗೆ ಖುಷಿಯಂದಲೇ ಪಾಲ್ಗೊಂಡಿದ್ದೇವೆ” ಎನ್ನುತ್ತಾರೆ ಪ್ರಿಯಾಂಕ ಉಪೇಂದ್ರರವರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com