ಪ್ರಿಯಾಂಕ ಚೋಪ್ರಾಗೆ ಗಾಯಕ ನಿಕ್ ಜೊತೆ ಎಂಗೇಜ್ಮೆಂಟ್

Published on

270 Views

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತನ್ನ ಬಹುಕಾಲದ ಗೆಳೆಯ ಗಾಯಕ ನಿಕ್ ಜೋನಾಸ್ ಅವರ ಜತೆ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲ ರೂಮರ್ಸ್ ಗೆ ತೆರೆಯೆಳೆದಿದ್ದಾರೆ. ಶನಿವಾರ ಈ ಜೋಡಿ ಕುಟುಂಬದ ಹಿರಿಯರ ಸಮ್ಮುಖದಲ್ಲಿ ರೋಕಾ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡರು. ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ‘ಭಾರತ್’ ಸಿನಿಮಾದಿಂದ ಹೊರ ಬಂದಿದ್ದಾರೆ ಪ್ರಿಯಾಂಕ. ‘ಭಾರತ್’ ಸಿನಿಮಾದ ನಿರ್ದೇಶಕ ಅಬ್ಬಾಸ್ ಜಫಲ್ ರವರು ‘ಪ್ರಿಯಾಂಕ ನಿಕ್ ಜೊತೆ ಕಾಲ ಕಳೆಯುತ್ತಿದ್ದಾರೆ. ಇದು ನಮಗೆ ಸಂತಸ ತಂದಿದೆ. ಅದರಿಂದ ಅವರು ನಮ್ಮ‌ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ‌ಟ್ವೀಟ್ ಮಾಡಿದ್ದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com