ಪ್ರಿಯಾ ವಾರಿಯರ್‌ ಬಾಲಿವುಡ್ ಗೆ…?

Published on

672 Views

ಪ್ರಿಯಾ ವಾರಿಯರ್‌ ಬಾಲಿವುಡ್ ಗೆ…?

ಸೋಶಿಯಲ್ ಮೀಡಿಯಾದ ಮೂಲಕ ತನ್ನ ಕಣ್ಣು ಸನ್ನೆಯಿಂದ ಭಾರೀ ಸಂಚಲನ ಉಂಟು ಮಾಡಿದ್ದ ಪ್ರಿಯಾ ಪ್ರಕಾಶ್ ವಾರಿಯರ್‌ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಕಣ್ಣು ಸನ್ನೆಯ ಮೂಲಕವೇ ಸಾಕಷ್ಟು ಹುಡುಗರ ನಿದ್ದೆಗೆಡಿಸಿರುವ ಪ್ರಿಯಾ ವಾರಿಯರ್‌ ಗೆ ಎಲ್ಲ ಭಾಷೆಯಿಂದಲೂ ಸಾಕಷ್ಟು ಅವಕಾಶಗಳು ಬರತೊಡಗಿದೆ. ಒಬ್ಬ ಮನುಷ್ಯನಿಗೆ ಅದೃಷ್ಟ ಅನ್ನೋದು ಹೇಗೆ ಕೈಹಿಡಿಯುತ್ತದೆ ಎನ್ನುವುದಕ್ಕೆ ಪ್ರಿಯಾ ವಾರಿಯರ್ ಉತ್ತಮ ಉದಾಹರಣೆ. ಸಿನಿಮಾ ಬಿಡುಗಡೆಯಾಗುವ ಮುಂಚೆಯೇ ಸಾಕಷ್ಟು ಹೆಸರು ಮಾಡಿರುವ ಪ್ರಿಯಾ ವಾರಿಯರ್‌ ಗೆ ದೊಡ್ಡ ಆಫರ್ ಬಾಲಿವುಡ್‌ ಯಿಂದ ಬಂದಿದೆ. ತೆಲುಗಿನಲ್ಲಿ ಸೂಪರ್ ಹಿಟ್ ಆದ ” ಸಿಂಬಾ” ಚಿತ್ರವನ್ನು ಬಾಲಿವುಡ್ ಗೆ ರಿಮೇಕ್ ಮಾಡುತ್ತಿದ್ದಾರೆ ರೋಹಿತ್ ಶೆಟ್ಟಿ.

ತೆಲುಗಿನಲ್ಲಿ ರಾಮ್ ರಾವ್ ಜೂನಿಯರ್‌ ಮತ್ತು ಕಾಜಲ್ ಅಗ್ರವಾಲ್ ನಟಿಸಿದ್ದರು. ಈಗ ಬಾಲಿವುಡ್ ” ಸಿಂಬಾ” ದಲ್ಲಿ ರಣವೀರ್ ಸಿಂಗ್ ಗೆ ಜತೆಯಾಗಿ ಪ್ರಿಯಾ ವಾರಿಯರ್‌ ನಟಿಸಲಿದ್ದಾಳೆ. ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ಸಂಸ್ಥೆ ಡೆಕ್ಕನ್ ಕ್ರಾನಿಕಲ್ ಕೂಡ ಈ ವಿಷಯವನ್ನು ಬಹಿರಂಗ ಪಡಿಸಿದೆ.ಬಾಲಿವುಡ್ ಎಂಟ್ರಿ‌ ಕೊಡುತ್ತಿರುವ ಪ್ರಿಯಾ ವಾರಿಯರ್‌ ಬಾಲಿವುಡ್ನಲ್ಲೂ ಹೆಸರು ಮಾಡುವಂತಾಗಲಿ‌ ಎಂದು‌ ಹಾರೈಸೋಣ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com