ಓಟಿಟಿಗೆ ಬಂದೇ ಬಿಡ್ತು ಪ್ರಥ್ವಿರಾಜ್ ಸುಕುಮಾರನ್ ಅಭಿನಯದ ಈ ಸೂಪರ್ ಹಿಟ್ ಚಿತ್ರ – ಈ ದಿನ ರಿಲೀಸ್ ಆದಂತೆ ಪಕ್ಕಾ ಓಟಿಟಿ ಬ್ಲಾಸ್ಟ್

Published on

983 Views

ಮಳಯಾಳಂ, ಕನ್ನಡ, ತೆಲುಗು, ಹಿಂದಿ, ತಮಿಳ್ ಹೀಗೆ ಎಲ್ಲಾ ಭಾಷೆಗಳಲ್ಲೂ ಸೂಪರ್ ಹಿಟ್ ಚಿತ್ರಗಳನ್ನೇ ನೀಡಿ ಸಿನಿಪ್ರಿಯರಲ್ಲಿ‌ ಕ್ರೇಜ್ ಹುಟ್ಟಿಸಿರುವ ನಾಯಕ-ಖಳನಾಯಕ‌ ನಟ ಪ್ರಥ್ವಿರಾಜ್ ಸುಕುಮಾರನ್ ಅಭಿನಯದ ಈ ಸೂಪರ್ ಹಿಟ್ ಚಿತ್ರ ಓಟಿಟಿಗೆ ಬರಬೇಕೆಂಬ ಬೇಡಿಕೆ ಬಹಳಷ್ಟಿತ್ತು.‌ ಅಂತೂ ಇಂತೂ ಈ ಚಿತ್ರ ಓಟಿಟಿಗೆ ಬರೋ ಡೇಟ್ ಫಿಕ್ಸ್ ಆಗಿದೆ.

 

ಈಗಾಗಲೇ ಸಲಾರ್ ಚಿತ್ರದಲ್ಲಿ ವಿಲನ್‌ ಆಗಿ ಧೂಳೆಬ್ಬಿಸಿರುವ ಪ್ರಥ್ವಿರಾಜ್ ಸುಕುಮಾರನ್ ಗೆ ಅವರದ್ದೇ ಆದ ಅಪಾರ ಅಭಿಮಾನಿ ಬಳಗವಿದೆ.

ನಾಯಕ ನಟನಾಗಿಯೂ, ಖಳನಾಯಕನಾಗಿಗೂ ಅತ್ಯದ್ಭುತ ನಟನೆಯ ಮೂಲಕ ಸಿನೆಮಾ ಜಗತ್ತಿನಲ್ಲಿ ಹೊಸ ಛಾಪು ಮೂಡಿಸಿರುವ ಇವರ ಈ ಚಿತ್ರ ಮಾರ್ಚ್ 20 ರಂದು ತೆರೆಕಂಡಿದ್ದೇ ತಡ, ಇಡೀ ಥಿಯೇಟರ್ ಗಳು ತುಂಬಿ ತುಳುಕಿದ್ದವು. ನೈಜ ಕಥೆಯನ್ನೇ ಆಧರಿಸಿದ ಈ ಚಿತ್ರವನ್ನು ಓಟಿಟಿಯಲ್ಲೂ ರಿಲೀಸ್ ಮಾಡುವಂತೆ ಸಿನಿಪ್ರಿಯರು ದುಂಬಾಲು ಬಿದ್ದಿದ್ದರು. ಕೊನೆಗೂ ಚಿತ್ರತಂಡ ಓಟಿಟಿ ರಿಲೀಸ್ ಡೇಟ್ ಫಿಕ್ಸ್ ಮಾಡಿ ಸಿನಿಪ್ರಿಯರಿಗೆ ಕೃಪೆತೋರಿದೆ. ಅಂದಹಾಗೆ ಇಷ್ಟೊಂದು ಕ್ರೇಜ್ ಹುಟ್ಟಿಸಿರೋ ಸಿನಿಮಾ ಯಾವುದು ಅಂತೀರಾ? ಹೇಳ್ತೀವಿ ನೋಡಿ.

ಕ್ರಿಯೇಟಿವ್ ನಿರ್ದೇಶಕ ಬ್ಲೆಸ್ಲಿ ಅವರ ನಿರ್ದೇಶನದೊಂದಿಗೆ, ನೈಜ ಕಥಾಹಂದರವನ್ನೇ ಒಳಗೊಂಡ ‘ಆಡುಜೀವಿತಂ’ ಸಿನಿಮಾ, ಓಟಿಟಿಗೆ ಕಿಚ್ಚು ಹಚ್ಚಲಿರೋ ಮಳಯಾಳಂ ಸೂಪರ್ ಹಿಟ್ ಚಿತ್ರ. ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಮಾಲಿವುಡ್ ಸಿನಿಮಾಗಳಲ್ಲಿ ಒಂದಾದ ಈ ಸಿನಿಮಾದಲ್ಲಿ ಪ್ರಥ್ವಿರಾಜ್ ಸುಕುಮಾರನ್ ನಟನೆಯಂತೂ ರಣಭಯಂಕರವಾಗಿತ್ತು.

ಕೇವಲ ಕೇರಳದಲ್ಲಲ್ಲದೇ, ಪಾನ್ ಇಂಡಿಯಾ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರೊಂದಿಗೆ, ಬರೋಬ್ಬರಿ ಎರಡು ತಿಂಗಳು ಥಿಯೇಟರ್ ನಲ್ಲಿ ಸ್ಟ್ರೀಮಿಂಗ್ ಆದ ಬಳಿಕ, ಈಗ ಸಿನಿಜಗತ್ತಿನ ಅಪೇಕ್ಷೆಯ ಮೇರೆಗೆ ಓಟಿಟಿ ಗೆ ಲಗ್ಗೆಯಿಡಲಿದೆ ‘ಆಡುಜೀವಿತಂ’. ಚಿತ್ರದಲ್ಲಿ ಪ್ರಥ್ವಿರಾಜ್ ಜೊತೆಯಾಗಿ ಅಮಲಾ ಪೌಲ್, ರಿಕ್ ಅಬಿ, ಕೆ.ಆರ್.ಗೋಕುಲ್, ತಬಿಬ್ ಅಲ್ ಬಲುಶಿ, ಸಂತೋಷ್ ಕೀಳತ್ತೂರ್, ನಾರ್ತ್ ಅಮೆರಿಕಾದ ಹೈತಿ ಯ ನಟ ಜಿಮ್ಮಿ ಜೀನ್ ಲೂಯಿಸ್ ಮುಂತಾದ ವರ್ಸಾಟೈಲ್ ತಾರಾಗಣವಿದೆ.

 

ಓಟಿಟಿ ಪ್ಲೇ ಹೇಳಿರುವಂತೆ ಇದೇ ಬರುವ ಮೇ. 26 ರಂದು ಓಟಿಟಿ ಗೋಡೆಗಳಿಗೆ ಪ್ರಥ್ವಿರಾಜ್ ಸುಕುಮಾರನ್ ಅಭಿನಯದ ಈ ಆ‌ಡುಜೀವಿತಂ ಚಿತ್ರ ಅಪ್ಪಳಿಸಲಿದೆ. ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿ ನೀಡದಿದ್ದರೂ ಕೂಡ, ಅದೇ ದಿನ ಡಿಸ್ನಿ + ಹಾಟ್ ಸ್ಟಾರ್’ನಲ್ಲಿ ರಿಲೀಸ್ ಆಗೋದು ಬಹುತೇಕ ಖಚಿತವಾಗಿದೆ.‌

ಓಟಿಟಿ ರಿಲೀಸ್ ಮುನ್ನವೇ ಟ್ರೆಂಡ್ ಆಗಿರುವ ಈ ಬಾಕ್ಸಾಫೀಸ್ ಹಿಟ್ ಚಿತ್ರ, ಓಟಿಟಿಯಲ್ಲೂ ಧೂಳೆಬ್ಬಿಸುವುದಂತೂ ಖಚಿತ.

 

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.

 

Copyright ©2026 . All Rights Reserved. privacy | terms Whatsapp: 9538193653 Email: hello@flixoye.com