ಪ್ರೀತಿಯ ರಾಯಭಾರಿ ಇಂದು ಬಿಡುಗಡೆ

Published on

489 Views

ನಾದಕಿರಣ್ ಪಿಕ್ಕ್ಚರ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ನಿರ್ಮಾಪಕ ಎಸ್ ಆರ್ ವೆಂಕಟೇಶ್ ಗೌಡ ಅವರ ಪುತ್ರ ನಕುಲ್ ಅಭಿನಯದ ಮೊದಲ ಚಿತ್ರ `ಪ್ರೀತಿಯ ರಾಯಭಾರಿ’. ನಿಜ ಜೀವನದಲ್ಲಿ ನಡೆದ ಘಟನೆಯ ಸುತ್ತ ಸುತ್ತುವ ಚಿತ್ರದ ಕಥಾ ವಸ್ತು. ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಒಂದು ಕ್ರೈಂ ಸುದ್ದಿ ನವ ನಿರ್ದೇಶಕ ಎಂ ಎಂ ಮುತ್ತು ಅವರಿಗೆ ಪ್ರೇರಣೆ ನೀಡಿ ಕಥೆ ರಚಿಸುವಂತೆ ಮಾಡಿದೆ.
ಈ ಘಟನೆ ಜರುಗಿದ ಸ್ಥಳ ಹಿರಿಯೂರು. ಈ ಚಿತ್ರಕ್ಕಾಗಿ ಬಹುತೇಕ ಚಿತ್ರೀಕರಣ ಕತ್ತೆಹೊಳೆ ಸಮೀಪದಲ್ಲೇ ನಿರ್ದೇಶಕ ಮುತ್ತು ಅವರು ಮಾಡಿದ್ದಾರೆ.

ನಕುಲ್ ಇಲ್ಲಿ ರೈತನ ಮಗನ ಪಾತ್ರ ಮಾಡುತ್ತಿದ್ದಾರೆ. ಬಹಳ ಮುಗ್ಧ ವ್ಯಕ್ತಿ ಪ್ರೀತಿಯಲ್ಲಿ ಸಿಲುಕುವುದು ಅಲ್ಲಿಂದ ಮುಂದೆ ಆಗುವ ಘಟನೆಗಳೇ ಚಿತ್ರದ ಕಥಾ ವಸ್ತು. ಮುದ್ದಾದ ಬೆಡಗಿ ಅಂಜನಾ ದೇಶ್ಪಾಂಡೆ ಚಿತ್ರದ ಕಥಾ ನಾಯಕಿ. ಮದನ್ ಈ ಚಿತ್ರದ ಖಳ ನಟ. ಚರಣ್ ರಾಜ್, ಪದ್ಮಜ ರಾವ್, ಸುಚೇಂದ್ರ ಪ್ರಸಾದ್, ಮುನಿ, ಸಾಧು ಕೋಕಿಲ, ವಿಕ್ಟರಿ ವಾಸು, ಲಕ್ಷ್ಮಿ ಸಿದ್ದಯ್ಯ ತಾರಾಗಣದಲ್ಲಿ ಇದ್ದಾರೆ.

ಯೋಗರಾಜ ಭಟ್, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್ ಅವರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನೀಡಿದ್ದಾರೆ. ರಾಜೇಶ್ ಕಟ್ಟ ಹಾಗೂ ದಿಲ್‍ರಾಜ ಛಾಯಾಗ್ರಹಣ, ಜೋನಿ ಹರ್ಷ ಅವರ ಸಂಕಲನ ಈ ಚಿತ್ರಕ್ಕಿದೆÉ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com