ಸರ್ಕಾರಿ ಶಾಲೆಯನ್ನು ದತ್ತು ಪಡೆದ ನಟಿ ಪ್ರಣಿತಾ ಸುಭಾಷ್

Published on

481 Views


ನಟಿ ಪ್ರಣಿತಾ ಸುಭಾಷ್ ಸರ್ಕಾರಿ ಶಾಲೆಯೊಂದನ್ನು 5ಲಕ್ಷ ನೀಡಿ ದತ್ತು ಪಡೆದುಕೊಂಡಿದ್ದಾರೆ. ಈಗ ಎಲ್ಲರೂ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಓದಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದೀಗ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಟಿ ಪ್ರಣಿತಾ ‌ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ. ನಿನ್ನೆ ಸರ್ಕಾರಿ ಶಾಲೆ ಉಳಿಸಿ ಅಂದೋಲನ ಸಮಿತಿಯ ವತಿಯಿಂದ ಸುದ್ದಿ ಗೋಷ್ಠಿ ನಡೆಯಿತು.

ಸಮಿತಿಯ ರಾಯಭಾರಿಯಾಗಿರುವ ಪ್ರಣಿತಾ ಭಾಗವಹಿಸಿದ್ದು, ಹಾಸನ ಜಿಲ್ಲೆಯ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದುಕೊಂಡಿದ್ದೇನೆ. ಮೂಲ ಸೌಕರ್ಯದ ಅಭಾವವಿದೆ. ಅದರ ಸಲುವಾಗಿ 5ಲಕ್ಷ ರೂ ಚೆಕ್ಕನ್ನು ಅಂದೋಲನ ಸಮಿತಿಗೆ ನಟಿ ಪ್ರಣಿತಾ ಹಸ್ತಾಂತರಿಸಿದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com