ಪ್ರಣತಿ ಕನ್ನಡಕ್ಕಾಗಿ ಓಟ ಜನವರಿ – ೭ -೨೦೧೮ ಕಬ್ಬನ್ ಪಾರ್ಕ್
“ಪ್ರಣತಿ”, ಅನೇಕ ಸಾಮಾಜಿಕ ಚಟುವಟಿಕೆಗಳು, ಜಾಗೃತಿ ಕಾರ್ಯಕ್ರಮಗಳು ಮತ್ತು ನಮ್ಮ “ಕ್ಲಾಸಿಕಲ್ ಲಾಂಗ್ವೇಜ್ ಆಫ್ ಇಂಡಿಯಾ ಕನ್ನಡ ” ಗಾಗಿ ಮುಖ್ಯವಾಗಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ವಂದನೆ ತೋರಿಸುವ ಸಲುವಾಗಿ ಪಣ ತೊಟ್ಟಿರುವ ಕರ್ನಾಟಕದ ಯುವ ಐಟಿ ಇಂಜಿನಿಯರ್ಗಳ ಒಂದು ಗುಂಪು.
ಈ ಬಾರಿಗೆ ನಮ್ಮ “ಪ್ರಣತಿ” ತಂಡವು ಕನ್ನಡ ಭಾಷೆಗಾಗಿ “ಕನ್ನಡಕ್ಕಾಗಿ ಓಟ ” ಎಂಬ ಮ್ಯಾರಥಾನ್ ನೆಡೆಸಲು ನಿರ್ಧರಿಸಿದ್ದೇವೆ.
ಕನ್ನಡ ಭಾಷೆಯು “ಕ್ಲಾಸಿಕಲ್ ಲಾಂಗ್ವೇಜ್ ಆಫ್ ಇಂಡಿಯಾ” ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು.
ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ, ಅದಲ್ಲದೆ ಭಾರತದ ಭಾಷೆಗಳಲ್ಲಿ ನಾಲ್ಕನೆಯ ಗೌರವ ಸ್ಥಾನವೂ ಕನ್ನಡಕ್ಕೆ ದೊರೆತಿದೆ.
ಇಂತಹ ನಮ್ಮ ಕನ್ನಡ ಭಾಷೆಗೆ ಕೃತಜ್ಞತೆ ಸಲ್ಲಿಸಲು ಮತ್ತು ಕನ್ನಡಿಗರಲ್ಲದ ಹೊರ ರಾಜ್ಯದ ಜನರಿಗೆ ಕನ್ನಡದ ಬಗ್ಗೆ ಅರಿವು ಮೂಡಿಸಲು ಈ ಓಟ ನೆಡೆಸಲು ನಿರ್ಧರಿಸಿದ್ದೇವೆ.
ನಮ್ಮ ಕನ್ನಡ ಭಾಷೆಗಾಗಿ , ನಿಮ್ಮ ಅಭಿಮಾನವನ್ನು , ಪ್ರೀತಿಯನ್ನು , ಕೃತಜ್ಞತೆಯನ್ನು ತೋರಿಸಲು ಕನ್ನಡಿಗರೆಲ್ಲರಿಗೂ ಇಲ್ಲಿದೆ ಒಂದು ಸುವರ್ಣಾವಕಾಶ.
ಬನ್ನಿ ಎಲ್ಲರೂ ಭಾಗವಹಿಸಿ ಈ ಐತಿಹಾಸಿಕ “ಕನ್ನಡಕ್ಕಾಗಿ ಓಟ ” ಎಂಬ ಮ್ಯಾರಥಾನ್ ನಲ್ಲಿ, ಇದೇ 7 ಜನವರಿ 2018 ರಂದು , ಕಬ್ಬನ್ ಪಾರ್ಕ್ ನಲ್ಲಿ.
ಕಬ್ಬನ್ ಪಾರ್ಕ್ ನ ಅಧಿಕೃತ ಹೆಸರು ಶ್ರೀ ಚಾಮರಾಜೇಂದ್ರ ಪಾರ್ಕ್ ಮತ್ತು ಇದೊಂದು ಐತಿಹಾಸಿಕ ಉದ್ಯಾನವನ. ಇದು ಬೆಂಗಳೂರಿನ ಹೃದಯ ಭಾಗದಲ್ಲಿದ್ದು, ಸುಮಾರು 300 ಎಕರೆ ವಿಸ್ತಾರವಿದೆ, ಇಲ್ಲಿ ಸುಮಾರು 600 ಕ್ಕೂ ಹೆಚ್ಚು ಮರಗಿಡಗಳಿವೆ ಹಾಗು ವಿವಿಧ ವನಸ್ಪತಿಗಳ ಉಚ್ಛ ಸಂಗ್ರಹಣೆಯನ್ನು ಇಲ್ಲಿ ಕಾಣಬಹುದು.
ವೆಬ್ ಸೈಟ್ : runforkannada.com
ಫೇಸ್ಬುಕ್ : https://m.facebook.com/runforkannada/
ಟ್ವಿಟ್ಟರ್ : https://twitter.com/RunKannada
ಲಿಂಕ್ಡಿನ್ : https://www.linkedin.com/in/pranati-run-for-kannada-407459154/
ಇನ್ಸ್ಟಗ್ರಾಮ್ : https://www.instagram.com/runforkannada2018/
ರಿಜಿಸ್ಟರ್ ಮಾಡಲು ಈ ಕೆಳಗಿನ ವೆಬ್ ಸೈಟ್ ಸಂಪರ್ಕಿಸಿ 👇
https://www.goeventz.com/event/pranati-run-for-kannada/58155
https://www.meraevents.com/event/pranati-run-for-kannada
https://in.bookmyshow.com/bengaluru/sports/pranati-run-for-kannada/ET00066028
https://www.townscript.com/e/pranati-run-for-kannada-230444
https://tixdo.com/pranati-run-for-kannada/event/
https://in.explara.com/e/pranati–run-for-kannada
ಎಲ್ಲರಿಗೂ ಸುಸ್ವಾಗತ.🌿🍀