ಶ್ರುತಿ ಹರಿಹರನ್ ಪರವಾಗಿ ಪ್ರಕಾಶ್ ರಾಜ್

Published on

372 Views


ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದಾಗಿಂದ ಶ್ರುತಿ ಅವರನ್ನು ವಿರುದ್ದಿಸಿದವರೇ ಜಾಸ್ತಿ. ಶ್ರುತಿ ಹರಿಹರನ್ ಬಾಯಿಗೆ ಬಂದಾಗೆ ಮಾತನಾಡುತ್ತಾಳೆ ಎಂದು ಸ್ಯಾಂಡಲ್ ವುಡ್ ಮಂದಿ ಶ್ರುತಿವರನ್ನು ದೂರುತ್ತಿದ್ದಾರೆ. ಈಗ ಹೊಸ ಸುದ್ದಿ ಪ್ರಕಾಶ್ ರಾಜ್ ಶ್ರುತಿ ಹರಿಹರನ್ ಪರ ಮಾತನಾಡಿದ್ದಾರೆ. “ಶ್ರುತಿ ಹರಿಹರನ್ ಕನ್ನಡ ಚಿತ್ರರಂಗದ ಕಂಡ ಪ್ರತಿಭಾವಂತೆ. ನಾನು ಆಕೆಯ ಪರ ಹಾಗೂ ನೊಂದ ಮಹಿಳೆಯ ಪರವಾಗಿ ನಿಲ್ಲುತ್ತೇನೆ. ಅರ್ಜುನ್ ಸರ್ಜಾರವರ ವರ್ತನೆ ಆಕೆಯಲ್ಲಿ ಉಂಟುಮಾಡಿದ ನೋವನ್ನು ಇಷ್ಟುದಿನಗಳ ಕಾಲ ತನ್ನೊಳಗೆ ಹುದುಗಿಸಿಕೊಂಡಿದ ಶ್ರುತಿ ಹರಿಹರನ್ ರವರ ನೋವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಆ ನೋವಿಗಾಗಿ ಅರ್ಜುನ್ ಸರ್ಜಾರವರು ಕ್ಷಮೆ ಕೇಳುವುದು ದೊಡ್ಡತನ. ಮೀಟೂ ಅಭಿಯಾನದ ಮುಂದಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ, ಅವಮಾನಗಳು ಕೊನೆ ಕಾಣಬೇಕು” ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com