ಕನ್ನಡ ಸಿನಿಮಾದ ಮೂಲಕ ನಿರ್ದೇಶಕರಾಗುತ್ತಿದ್ದಾರೆ ಪ್ರಭುದೇವ್ ಸಹೋದರ ನಾಗೇಂದ್ರ ಪ್ರಸಾದ್
ನೃತ್ಯ ಸಯೋಜಕ, ನಟ ನಾಗೇಂದ್ರ ಪ್ರಸಾದ್ ಈಗ ನಿರ್ದೇಶಕರಾಗುತ್ತಿದ್ದಾರೆ. ನಟ ನಾಗೇಂದ್ರ ಪ್ರಸಾದ್ ಖ್ಯಾತ ಡ್ಯಾನ್ಸ್ ಮಾಸ್ಟರ್ ಮೂಗೂರ್ ಸುಂದರ್ ರವರ ಕಿರಿಯ ಪುತ್ರ ಹಾಗೂ ನಟ ಪ್ರಭುದೇವ್ ರವರ ಸಹೋದರ. ಪ್ರಭುದೇವ್ ಅವರ ಜೊತೆ ಕೆಲಸ ಮಾಡಿ ಅನುಭವ ಪಡೆದಿರುವ ನಾಗೇಂದ್ರ ಪ್ರಸಾದ್ ರವರು ತಮಿಳಿನ ಅಶ್ವಥ್ ಮಾರಿಮುತ್ತು ನಿರ್ದೇಶಿಸಿದ ರೊಮ್ಯಾಂಟಿಕ್ ಡ್ರಾಮಾ ಸಿನಿಮಾ “ಓಹ್ ಮೈ ಕಡವುಲೆ” ಚಿತ್ರವನ್ನು ಕನ್ನಡದಲ್ಲಿ ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ.
ಕನ್ನಡದಲ್ಲಿ ‘ಚಿತ್ರ’, ‘ಮನಸ್ಸೆಲ್ಲಾ ನೀನೇ’ ಚಿತ್ರಗಳಲ್ಲಿ ನಾಯಕನಟನಾಗಿಯೂ ಗುರುತಿಸಿಕೊಂಡಿದ ಇವರು ಡ್ಯಾನ್ಸ್ ಮಾಸ್ಟರ್ ಆಗಿ ಕೂಡ ಗುರುತಿಸಿಕೊಂಡವರು. ತಮಿಳಿನ ಮೂಲ ಚಿತ್ರದಲ್ಲಿ ಅಶೋಕ್ ಸೆಲ್ವನ್ ಮತ್ತು ರಿತಿಕಾ ಸಿಂಗ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅತಿಥಿ ಪಾತ್ರದಲ್ಲಿ ಜನಪ್ರಿಯ ತಮಿಳು ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದರು. ಕನ್ನಡ ರಿಮೇಕ್ ನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆಂಬ ಮಾಹಿತಿ ಮಾತ್ರ ಇನ್ನು ಬಂದಿಲ್ಲ. ಚೊಚ್ಚಲ ಕನ್ನಡ ಸಿನಿಮಾಕ್ಕೆ ಈಗಾಗಲೇ ಕೆಲವು ನಟ-ನಟಿಯರ ಹೆಸರುಗಳು ಶಾರ್ಟ್ ಲಿಸ್ಟ್ ನಲ್ಲಿದ್ದು, ಕೆಲ ನಾಯಕ ನಟರ ಜೊತೆ ಮಾತುಕತೆ ನಡೆಸಿದ್ದು, ಚರ್ಚೆಯಲ್ಲಿದೆ ಎನ್ನುತ್ತಾರೆ ನಾಗೇಂದ್ರ ಪ್ರಸಾದ್.