‘ಸೂಪರ್ ಸ್ಟಾರ್’ ನಲ್ಲಿ ಪ್ರಭುದೇವ್ ತಂದೆ ಸುಂದರ್ ಮೂಗೂರ್..

Published on

349 Views

ಲಾಕ್ ಡೌನ್ ಗೂ ಮುಂಚೆ‌ ಶುರುವಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಾಯಕನಾಗಿ ನಟಿಸುತ್ತಿರುವ ‘ಸೂಪರ್ ಸ್ಟಾರ್’ ಸಿನಿಮಾದಲ್ಲಿ ಪ್ರಭುದೇವ್ ಅವರ ತಂದೆ ನೃತ್ಯ ನಿರ್ದೇಶಕ ಸುಂದರ್ ಮೂಗೂರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ರಮೇಶ್ ವೆಂಕಟೇಶ್ ನಿರ್ದೇಶನದ ‘ಸೂಪರ್ ಸ್ಟಾರ್’ ಸಿನಿಮಾದ ಶೇ.20ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದ್ದು, ನಾಯಕ ನಟಿ ಹಾಗೂ ಇನ್ನಿತರ ಕಲಾವಿದರ ಆಯ್ಕೆ ಆಗಬೇಕಿದೆ. ರಮೇಶ್ ಚಿತ್ರಕಥೆ ಬರೆದಿದ್ದು, ಆರ್ ವಿಬಿ ಸಿನಿಮಾ ಬ್ಯಾನರ್ ಅಡಿ ಮೈಲಾರಿ ಪ್ರೊಡಕ್ಷನ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಲಾಕ್ ಡೌನ್ ನಿಂದ ನಿಂತು‌ಹೋಗಿದ್ದ ಚಿತ್ರೀಕರಣ ಡಿಸೆಂಬರ್ ನಲ್ಲಿ ಮುಂದುವರಿಯಲಿದೆ. ಈ ಸಿನಿಮಾದ ಟೀಸರ್ ಆ. 20 ರಂದು ಬಿಡುಗಡೆಯಾಗಿ, ಭಾರೀ ನಿರೀಕ್ಷೆಯೊಂದಿಗೆ ಕುತೂಹಲ ‌ಮೂಡಿಸಿದೆ. ಈ ಸಿನಿಮಾದಲ್ಲಿ ನಾಯಕ ನೃತ್ಯ ಗಾರನ ಪಾತ್ರದಲ್ಲಿ ನಟಿಸಿದ್ದು, ನೃತ್ಯ ಕ್ಷೇತ್ರದಲ್ಲೇ ಸೂಪರ್ ‌ಸ್ಟಾರ್ ಆಗುವ ಕಥಾಹಂದರ ಹೊಂದಿದೆ ಸೂಪರ್ ಸ್ಟಾರ್. ಈ ಸಿನಿಮಾಕ್ಕೆ ರಾಘವೇಂದ್ರ ವಿ.ಯೋಗಿ ನೃತ್ಯ ಸಯೋಜನೆಯಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com