ಒಂದೊಳ್ಳೆ ಲವ್ ಸ್ಟೋರಿ ಎಂಬ ಹೊಸ ತಂಡಕ್ಕೆ ದೊಡ್ಮನೆ ಪವರ್ ಸಾಥ್

ಹೊಸಬರ ಹೊಸತನದ ಒಂದೊಳ್ಳೆ ಲವ್ ಸ್ಟೋರಿ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಿ ಹೊಸಬರಿಗೆ ಪ್ರೋತ್ಸಾಹಿಸಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್.
ಪಿನಾಕಿನ ಸಿನಿಮಾದಡಿಯಲ್ಲಿ ನಿರ್ಮಾಣವಾದ ” ಒಂದೊಳ್ಳೆ ಲವ್ ಸ್ಟೋರಿ ಚಿತ್ರವು ಇತ್ತಿಚಿಗೆ ತಾನೇ ಚಿತ್ರೀಕರಣ ಸಂಪೂರ್ಣಗೊಳಿಸಿ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಒಟ್ಟು 58 ದಿನಗಳ ಕಾಲ ಚಿಕ್ಕಮಗಳೂರು, ಮಂಗಳೂರು ಸುತ್ತ -ಮುತ್ತ ಚಿತ್ರೀಕರಣ ನಡೆಸಲಾಗಿದೆ. ಕೊರೊನ ಸಂಕಷ್ಟದ ನಡುವೆಯು ಹೊಸ ತಂಡವನ್ನು ಕಟ್ಟಿಕೊಂಡು ನಿರ್ಮಾಪಕರಾದಂತಹ ಅಶ್ವಿನ್ ಮತ್ತು ನಿರಂಜನ್ ಬಾಬು ಅವರು ಚಿತ್ರವನ್ನು ನಿರ್ಮಿಸಿದ್ದಾರೆ.
ನವಿರಾದ ಪ್ರೇಮ ಕಥೆಗೆ ಪ್ರವೀಣ ಸುತಾರ್ ಆಕ್ಷನ್ ಕಟ್ ಹೇಳಿದ್ದು, ಹೊಸತನದ ಲವ್ ಸ್ಟೋರಿ ಬಯಸಬಹುದು. ಚಿತ್ರಕ್ಕೆ ವಿನೋದ್ ಮಂಡ್ಯ ಅವರ ಕ್ಯಾಮೆರಾ ಕೈ ಚಳಕವಿದ್ದು, ಆಕಾಶ ಜಾಧವ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಹಾಗೇನೇ ಪ್ರತಿಭಾವಂತ ವಿಜೇಂದ್ರ ಜೋಡಿದಾರ ಸಂಭಾಷಣೆ ಹೊಣೆ ಹೊತ್ತಿದ್ದಾರೆ.
ಕೋರೊನ ಸಂಕಷ್ಟದಿಂದ ಎಲ್ಲವೂ ಸುಗಮವಾದರೆ ಇದೇ ದೀಪಾವಳಿಗೆ ಒಂದೊಳ್ಳೆ ಲವ್ ಸ್ಟೋರಿಯನ್ನು ಚಿತ್ರಮಂದಿರದಲ್ಲಿ ನೋಡಬಹುದು.
ಹೊಸಬರ ಈ ಸಿನೆಮಾದಲ್ಲಿ ಅಶ್ವಿನ್, ಜಿ.ವೆಂಕಟೇಶ್ ಬಿಗ್ ಬಾಸ್ ಖ್ಯಾತಿಯ ಧನುಶ್ರೀ, ವಿಂದುಜಾ, ಕೈಲಾಶ ಪಾಲ್ , ನಿರಂಜನ್ ಬಾಬು , ನಿಶಾ ಇನ್ನೂ ಮುಂತಾದವರು ಅಭಿನಯಿಸಿದ್ದಾರೆ. ಈ ಹೊಸಬರ ಪ್ರಯತ್ನಕ್ಕೆ ಶುಭವಾಗಲಿ.