ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಟಾಲಿವುಡ್ಗೆ ಎಂಟ್ರಿ!!

Published on

514 Views

ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಪವನಕಲ್ಯಾಣ ಪವರ್ ಸ್ಟಾರ್ ಎಂದು ಬಿರುದಾಂಕಿತರಾಗಿದ್ದಾರೆ. ಈಗ ನಮ್ಮ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದಾ. ಪುನೀತ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಆದರಾ..? ಏಕಾಂಗಿ ಹೀರೋನಾ? ಅಥವಾ ಮಲ್ಟಿಸ್ಟಾರ್ ನಾಯಕನಾ..? ಪುನೀತ್ ಎದುರು ನಟಿಸುತ್ತಿರುವ ನಾಯಕನಟ, ನಟಿಯರು ಎಂಬ ನಾನಾ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡಾಡುತ್ತಿರುತ್ತಾರೆ.ಆದರೆ ಪುನೀತ್ ನಟನಾಗಿ ಟಾಲಿವುಡ್ಗೆ ಎಂಟ್ರಿ ಕೊಟ್ಟಿಲ್ಲ, ಬದಲಿಗೆ ತೆಲುಗಿನಲ್ಲಿ ರಿಯಲ್ ದಂಡುಪಾಳ್ಯ ಎಂಬ ಆಡಿಯೋವನ್ನು ತಮ್ಮ ಪಿಆರ್ಕೆ ಮೂಲಕ ಖರೀದಿಸುವ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

ದಂಡುಪಾಳ್ಯ ಭಾಗಗಳು ತೆರೆಕಂಡಿವೆ, ಇದ್ಯಾವುದೂ ರಿಯಲ್ ದಂಡುಪಾಳ್ಯ ಎಂದು ಕೊಂಡಿರಾ, ಮುಸ್ಸಂಜೆ ಮಹೇಶ್ ನಿರ್ದೇಶಿಸಿ, ರಾಗಿಣಿ, ಮೇಘನಾರಾಜ್, ನಕ್ಷತ್ರ, ಪ್ರಾರ್ಥನಾ ವಿನಯ್ಪ್ರಕಾಶ್, ಸಂಯುಕ್ತಾ ಬೆಳವಾಡಿ ಅವರು ಮುಖ್ಯ ಭೂಮಿಕೆಯಲ್ಲಿರುವ ಎಂಎಂಸಿಎಚ್ ಚಿತ್ರವೇ ಟಾಲಿವುಡ್ನಲ್ಲಿ ರಿಯಲ್ ದಂಡುಪಾಳ್ಯ ಆಗಿದೆ. ಈಗ ಹೇಳಿ ಪುನೀತ್ ರಿಯಲ್ ದಂಡುಪಾಳ್ಯ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿರುವುದರಿಂದ ಟಾಲಿವುಡ್ಗೆ ಎಂಟ್ರಿ ಕೊಟ್ಟಂತೆ ತಾನೇ..? ಆದಷ್ಟು ಬೇಗ ಅವರು ನಟನಾಗಿಯೂ ಆ ಚಿತ್ರರಂಗದಲ್ಲಿ ಬೆಳಗುವಂತಾಗಲಿ ಎಂಬುದೇ ಸಿನಿಉದಯಕಾಲ ಪತ್ರಿಕೆಯ ಆಶಯ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com