“ಚತುರ” ಮುನಿ ಜೊತೆ ಮೊದಲ ಬಾರಿಗೆ ಪೂಜಾ ಲೋಕೇಶ್

Published on

505 Views

“ಚತುರ” ಮುನಿ ಜೊತೆ ಮೊದಲ ಬಾರಿಗೆ ಪೂಜಾ ಲೋಕೇಶ್

ಇತ್ತೀಚೆಗಷ್ಟೆ ತೆರೆಕಂಡ ಗಾಯತ್ರಿ ಎಂಬ ಹಾರರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಸತ್ಯ ಸಾಮ್ರಾಟ್ ಈಗ ಒಂದು ಸಾಮಾಜಿಕ ಸಂದೇಶವುಳ್ಳ ಕಥಾಹಂದರವನ್ನು ಕೈಗೆತ್ತಿಕೊಂಡಿದ್ದಾರೆ. ಚತುರ ಹೆಸರಿನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡುತ್ತಿರುವ ಸತ್ಯ ಸಾಮ್ರಾಟ್ ಫೆಬ್ರವರಿ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭಿಸಿ ಬೆಂಗಳೂರು, ಮೈಸೂರು ಹಾಗೂ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಿದ್ದಾರೆ. ಹಳ್ಳಿಯಿಂದ ಪಟ್ಟಣಕ್ಕೆ ಬಂದ ಹುಡುಗಿಯನ್ನು ಜನ ಹೇಗೆಲ್ಲ ಕಾಣುತ್ತಾರೆ ಎಂಬ ಅಂಶದ ಮೇಲೆ ಈ ಕಥೆ ನಡೆಯಲಿದೆ. ಖಳ, ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದ ಮುನಿ ಅಪರೂಪಕ್ಕೆನ್ನುವಂತೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ನಟಿ ಪೂಜಾ ಲೋಕೇಶ್ ಈ ಚಿತ್ರದಲ್ಲಿ ಬಹಳ ದಿನಗಳ ನಂತರ ನಾಯಕಿಯಾಗಿ ನಟಿಸುವ ಮೂಲಕ ಬಣ್ಣ ಹಚ್ಚಲಿದ್ದಾರೆ.

ಶ್ರೀ ದಳವಾಯಿ ಬೀರೇಶ್ವರ ಸಿನಿ ಪ್ರೊಡಕ್ಷನ್ ಲಾಂಛನದಲ್ಲಿ ಮಂಜು.ಎಸ್. ಪಟೇಲ್ ಸುಮತಿ ಶ್ರೀನಿವಾಸ್ ನಿರ್ಮಿಸುತ್ತಿರುವ ಚತುರ ಚಿತ್ರಕ್ಕೆ ವಿನೋದ್ ಭಾರತಿ ಛಾಯಾಗ್ರಹಣ, ಅಭಿಷೇಕ್ ರಾಯ್ ಸಂಗೀತ, ಎಸ್.ಸಾಮ್ರಾಟ್ ಸಾಹಿತ್ಯ, ದುರ್ಗ ಪಿ.ಎಸ್. ಸಂಕಲನವಿದೆ. ಮುನಿ, ಪೂಜಾ ಲೋಕೇಶ್, ಶೋಭರಾಜ್, ಹರೀಶ್ ರಾಯ್ ಕೋಟೆ ಪ್ರಭಾಕರ್, ಪೆಟ್ರೋಲ್ ಪ್ರಸನ್ನ, ಕರುಣಾಕರ್, ಲಕ್ಷ್ಮೀ ಸಿದ್ದಯ್ಯ, ವಾಸು, ಮೈಕೋ ನಾಗರಾಜ್ ಅನಂತ್ ವೇಲು, ಅಪೂರ್ವ, ರಾಣಿ ಮುಂತಾದವರು ತಾರಾಬಳಗವಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com