“ಆಕ್ಟ್-1978 ಚಿತ್ರಕ್ಕೆ ಪೋಲೀಸ್ ಅಧಿಕಾರಿಗಳ ಸಾಥ್ ಚಿತ್ರದ ಯಶಸ್ಸಿಗೆ ಹರಿದು ಬಂದ ಪ್ರಶಂಸೆ”
ಬೆಂಗಳೂರು ಡಿ.ಸಿ.ಪಿ ನಿಶಾ ಜೇಮ್ಸ್ ಅವರು “ಆಕ್ಟ್-1978” ಕನ್ನಡ ಸಿನಿಮಾ ವೀಕ್ಷಿಸಿ ಬಹಳ ಇಷ್ಟಪಟ್ಟು, ಸಿನಿಮಾದಲ್ಲಿರುವ ಸಂದೇಶ ಎಲ್ಲರಿಗೂ ತಲುಪಬೇಕು ಎಂಬ ಆಶಯದಿಂದ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ.
ಅವರು ಬೆಂಗಳೂರಿನ ಕಮಿಷನರ್ ಕಛೇರಿಯ ಎಲ್ಲ ಸಿಬ್ಬಂದಿಗೆ ಪ್ರದರ್ಶನ ಏರ್ಪಡಿಸಿ ಸಿನಿಮಾ ತೋರಿಸಿದ್ದಾರೆ.
ಸಿನಿಮಾ ನೋಡಿದ ಕಛೇರಿಯ ಸಿಬ್ಬಂದಿ ಭಾವುಕರಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಮತ್ತು ಇಂತಹ ಒಳ್ಳೆಯ ಸಿನಿಮಾಗಳು ಕನ್ನಡದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಹೇಳಿದ್ದಾರೆ.
“ಆಕ್ಟ್-1978” ಸಿನಿಮಾ ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳ ಬಾಕ್ಸ್ ಆಫೀಸ್ ಗಳಿಕೆ ಉತ್ತಮವಾಗಿದ್ದು.
ಕರೋನಾ ಭಯದ ನಡುವೆಯೂ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುತ್ತಿದ್ದು,
ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕುತ್ತಿದೆ.
ಮುಂದಿನ ದಿನಗಳಲ್ಲಿ ಅಕ್ಕ ಪಕ್ಕದ ರಾಜ್ಯಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಗಳಿವೆ.
ಈ ಎಲ್ಲ ಬೆಳವಣಿಗೆಯ ಆಧಾರದ ಮೇಲೆ ಹೇಳುವುದಾದರೆ “ಚಿತ್ರಮಂದಿರಗಳಲ್ಲೇ ಸಿನಿಮಾ ಬಿಡುಗಡೆ ಮಾಡಬೇಕು” ಎಂಬ ತಂಡದ ನಿರ್ಧಾರಕ್ಕೆ ಯಶಸ್ಸು ಸಿಕ್ಕಿದೆ.
ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಚಿತ್ರವನ್ನು ಚಿತ್ರ ಮಂದಿರದಲ್ಲೇ ಬಿಡುಗಡೆ ಮಾಡಿದ
ಆಕ್ಟ್-1978 ಚಿತ್ರದ ನಿರ್ದೇಶಕ ಮಂಸೋರೆ ಹಾಗೂ ನಿರ್ಮಾಪಕ ದೇವರಾಜ್ ಅವರ ಆಶಯಕ್ಕೆ ಜಯ ಸಿಕ್ಕಿದೆ..
ಈ ತಂಡದಿಂದ ಇನ್ನಷ್ಟು ಒಳ್ಳೆಯ ಸದಭಿರುಚಿಯ ಚಿತ್ರಗಳು ಹೊರ ಹೊಮ್ಮಲಿ ಎಂಬುದು ನಮ್ಮ ಆಶಯ.