ತೆಲುಗು,ತಮಿಳಿನಲ್ಲೂ ಸೌಂಡ್ ಮಾಡುತ್ತಿರುವ‌ ‘ಪೊಗರು’

Published on

699 Views

ಸ್ಯಾಂಡಲ್‌ವುಡ್ ನಲ್ಲಿ ಈಗಾಗಲೇ ‌ಟ್ರೈಲರ್ ಮೂಲಕ ಭಾರೀ ಸದ್ದು ಮಾಡುತ್ತಿರುವ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ನಟಿಸಿರುವ‌, ನಂದ ಕಿಶೋರ್ ನಿರ್ದೇಶನದ ‘ಪೊಗರು’ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು‌ ಮತ್ತು‌ ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ.

ಹೊಸ ವರುಷದಲ್ಲಿ ತಮಿಳು ಮತ್ತು ತೆಲುಗು‌ ವರ್ಷನ್ ಟ್ರೇಲರ್ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ 4 ಮಿಲಿಯನ್ ವೀಕ್ಷಣೆ ಪಡೆದುಕೊಂಡು ಸಖತ್ ಸೌಂಡ್ ಮಾಡುತ್ತಿದೆ. ‘ಪೊಗರು’ ಸಿನಿಮಾದ ತಮಿಳು‌ ತಮಿಳು ವರ್ಷನ್ ಸೆಮ‌ ತಿಮಿರು ಟ್ರೇಲರ್‌ನ್ನು ಸ್ಟಾರ್ ಮ್ಯೂಸಿಕ್ ಇಂಡಿಯಾ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದೆ.

ಇದನ್ನು ಟ್ವಿಟರ್ ನಲ್ಲಿ ಹಂಚಿಕೊಂಡ ಧ್ರುವ ಸರ್ಜಾ ಇನ್ನು ಇದನ್ನು ಹೆಚ್ಚು ಶೇರ್ ಮಾಡಬೇಕೆಂದು ಕೇಳಿಕೊಂಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com