ಭಾರಿ ಮೊತ್ತಕ್ಕೆ ಹಿಂದಿಗೆ ಡಬ್ಬಿಂಗ್ ಹಕ್ಕಿಗೆ ಮಾರಾಟವಾದ ‘ಪೊಗರು’
ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರ ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡುತ್ತಿದೆ. ಪೊಗರು ಸಿನಿಮಾದ ಡೈಲಾಗ್ ಟೀಸರ್ ಮತ್ತು ವಿಡಿಯೋ ಸಾಂಗ್ ಯು ಟ್ಯೂಬ್ ನಲ್ಲಿ ವೈರಲ್ ಆಗಿದ್ದು, ಕರಾಬು ಸಾಂಗ್ ಕನ್ನಡದಲ್ಲಿ ಅತೀ ಹೆಚ್ಚು ವೀಕ್ಷಣೆಯಾಗಿರುವಂತಹ ಈ ಹಾಡು ಸಿನಿಮಾ ಬಿಡುಗಡೆಗೂ ಮುನ್ನ ಸದ್ದು ಮಾಡುವಂತಾಯಿತು.
‘ಪೊಗರು’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಪೊಗರು ತೆಲುಗಿನಲ್ಲಿ ಕೂಡ ತೆರೆಕಾಣಲಿದೆ. ತೆಲುಗು ವಿಡಿಯೋ ಸಾಂಗ್ ಕೂಡ ಹಿಟ್ ಆಗಿದ್ದು, ಇದೀಗ ಹೊಸ ಸುದ್ದಿಯೊಂದು ಚಿತ್ರತಂಡದಿಂದ ಹೊರ ಬಿದ್ದಿದೆ ನಂದಕಿಶೋರ್ ನಿರ್ದೇಶನದ ‘ಪೊಗರು’ ಸಿನಿಮಾ 7.2 ಕೋಟಿಗೆ ಹಿಂದಿ ಡಬ್ಬಿಂಗ್ ಗೆ ಮಾರಾಟವಾಗಿದೆ.
ಹಿಂದಿ ಮತ್ತು ತೆಲುಗಿಗೆ ಡಬ್ ಆಗುತ್ತಿದ್ದು ಇದು ಚಿತ್ರತಂಡದ ಮತ್ತು ನಿರ್ಮಾಪಕರ ಹುಮ್ಮಸ್ಸನ್ನು ಇನ್ನಷ್ಟು ಹೆಚ್ಚಿಸಿದೆ. ಚಿತ್ರವನ್ನು ಡಿಸೆಂಬರ್ 25 ಅಥವಾ ಜನವರಿ 14 ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ. ಡಾಲಿ ಧನಂಜಯ್ ಪ್ರಮಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಬಿ.ಕೆ ಗಂಗಾಧರ್ ಬಂಡವಾಳ ಹೂಡಿದ್ದು, ಚಂದನ್ ಶೆಟ್ಟಿ ಹಾಗೂ ಸಂಗೀತ ವಿಜಯ್ ಮಿಲ್ಟನ್ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ಪ್ರಶಾಂತ್ ರಾಜಪ್ಪ ಈ ಚಿತ್ರಕ್ಕೆ ಡೈಲಾಗ್ ಬರೆದಿದ್ದಾರೆ.