ದುನಿಯಾ ರಶ್ಮಿ ಮನೆ ಮಹಡಿಯಿಂದ ಬಿದ್ದು ಫೋಟೋಗ್ರಾಫರ್ ಸಾವು

Published on

430 Views


ದುನಿಯಾ ರಶ್ಮಿ ಸಹೋದರ ಅರುಣ್ ಹಾಗೂ ಫೋಟೋಗ್ರಾಫರ್ ಪ್ರತೀಕ್ ಗೆಳೆಯರಾಗಿದ್ದು, ಪ್ರತೀಕ್ ಭಾನುವಾರ ರಾತ್ರಿ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಪಾರ್ಟಿ ನಡೆಯುತ್ತಿದ್ದ ಸಮಯದಲ್ಲಿ ಕುಡಿದ ಮತ್ತಿನಲ್ಲಿ ಪ್ರತೀಕ್ ಮನೆಯ ಮಹಡಿಯಿಂದ ಕೆಳಗೆ‌ ಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಪ್ರತೀಕ್ ಸಾವನ್ನಪ್ಪಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಪೋಲೀಸರಿಗೆ ಮಾಹಿತಿ ನಿಡಿದ ಬಳಿಕವೇ ಮೃತನ ಪಾಲಕರಿಗೆ ವಿಷಯ ತಿಳಿಸಿದು, ಅಲ್ಲದೇ ಸಾವಿಗೆ ಕಾರಣ ಏನು ಎಂಬುದನ್ನು ಸರಿಯಾಗಿ ತಿಳಿಸದ ಕಾರಣ ದುನಿಯಾ ರಶ್ಮಿ ಕುಟುಂಬದವರ ವಿರುದ್ಧವೇ ಮೃತನ ತಂದೆ ಕೃಪಾನಿಧಿ ದೂರು ನೀಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com