ಪವನ್ ಕುಮಾರ್ ರವರ ಮೂಕಿ ಕಿರುಚಿತ್ರ “ಅಸ್ಮಿತೆ”…
ನಿರ್ದೇಶಕ ಪವನ್ ಕುಮಾರ್ ‘ಅಸ್ಮಿತೆ’ ಎಂಬ 19 ನಿಮಿಷದ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪವನ್ ಕುಮಾರ್ ರವರ ಈ ಚಿತ್ರವೂ ಭಾವನಾತ್ಮಕವಾಗಿ ಹಾಗೂ ಬಹಳ ಆಪ್ತವಾಗಿ ಮೂಡಿಬಂದಿದೆ. ಇದು ಮೂಕಿ ಕಿರುಚಿತ್ರವಾಗಿದ್ದು, ಪರಭಾಷಿಗರಿಗೂ ಇದು ಅರ್ಥವಾಗಲಿ ಎಂದು ಯಾವುದನ್ನು ನೇರವಾಗಿ ಹೇಳದೆ ನೋಡುಗನ ದೃಷ್ಟಿಗೆ ಬಿಟ್ಟಿದ್ದಾರೆ. ಈ ಚಿತ್ರದ ಕಥಾವಸ್ತು ‘ಹಿಂದಿ ಹೇರಿಕೆ ಹಾಗೂ ನನ್ನ ಭಾಷೆಯಲ್ಲಿ ಸೇವೆ ಒದಗಿಸಿ’ ಎಂಬ ಹೇಳಿಕೆ ನೀಡುವುದು. ಅದನ್ನು ಪವನ್ ಕುಮಾರ್ ತಾಯಿ ಮಗನ ಪ್ರೀತಿಯ ಮೂಲಕ ತೋರಿಸಿದ್ದಾರೆ.
ಮಲತಾಯಿ ಹೊರಗಿನವಳು ಎಂದು ಹಿಂದಿ ಹೇರಿಕೆಗೆ ಹೋಲಿಕೆ ಮಾಡಿ ತೋರಿಸಿದ್ದಾರೆ. ಈ ಕಿರುಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಸಮಿಕ್ ಶೆಣೈ, ಸೂರಜ್ ಕಿಶೋರ್, ಸುಷ್ಮಾ ನಿರ್ಮಲ್ ಅಚ್ಚುಕಟ್ಟಾಗಿ ಅಭಿನಯ ಮಾಡಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ಪವನ್ ಕುಮಾರ್ ಪತ್ನಿ ಸೌಮ್ಯ ಜಗನ್ ಮೂರ್ತಿ ಹಾಗೂ ಪುತ್ರಿ ಲಾಸ್ಯ ಪಸೌ ಕೂಡ ಅಭಿನಯ ಮಾಡಿದ್ದಾರೆ.
ಗೊಮ್ಟೇಶ್ ಉಪಾಧ್ಯೆಯವರ ಛಾಯಾಗ್ರಹಣವಿದ್ದು, ಸುರೇಶ್ ಅರುಮುಗಂ ಸಂಕಲನ ನೀಡಿದ್ದಾರೆ. ಚಿತ್ರದ ಕೊನೆಯಲ್ಲಿ ಕಣ್ಣಲ್ಲಿ ನೀರು ಭರಿಸುತ್ತದೆ. ಪೂರ್ಣ ಚಂದ್ರ ತೇಜಸ್ವಿಯವರ ಸಂಗೀತ ಕಿರುನಗೆಯನ್ನು ಮೂಡಿಸುತ್ತ ಈ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮನಸ್ಸಿನಲ್ಲಿ ಉಳಿಯುತ್ತದೆ.