ಪರಿಧಿ’ಇಂದು ಬಿಡುಗಡೆ

Published on

326 Views

‘ಪರಿಧಿ’ಇಂದು ಬಿಡುಗಡೆ
—————————-
ವರ್ಷಗಳ ನಂತರ ಮತ್ತೊಂದು ಮೂಕಿ ಸಿನಿಮಾ ನಾಳೆಯಿಂದ ಬಿಡುಗಡೆ ಆಗುತ್ತಿದೆ. ಅದೇ ‘ಪರಿಧಿ’ ? ಮ್ಯಾಡ್ ಕ್ರಿಯೇಷನ್ ಅಡಿಯಲ್ಲಿ ಚಿತ್ರದ ಕಥಾ ನಾಯಕ ಐಷಾರಾಮಿ ಜೀವನದ ಆಸೆಗೆ ಬಲಿಯಾಗಿ ಗೊತ್ತಿಲ್ಲದ ಹಾಗೆ ಅಪರಾದ ಜಗತ್ತಿಗೆ ಕಾಲಿಡುತ್ತಾನೆ. ಚಿತ್ರ ವಿಚಿತ್ರ ಘಟನೆಗಳು ಅವನ ಸುತ್ತ ಜರುಗಲಿದೆ. ಸಿಲುಕಿರುವ ವರ್ತುಲದಿಂದ ಹೇಗೆ ಪಾರಾಗುತ್ತಾನೆ ಎಂಬುದನ್ನೂ ಮಾತಿಲ್ಲದೆ ನಿರ್ದೇಶಕ ಎಸ್ ಬಿ ಶ್ರೀನಿವಾಸ್ ಕಥೆ, ಚಿತ್ರಕಥೆ ಬರೆದು ಹೇಳಿದ್ದಾರೆ.

ನಂದಕುಮಾರ್ ಈ ಚಿತ್ರದ ನಿರ್ಮಾಪಕರು. ಜೀವ ಆಂಟೋನಿ ಛಾಯಾಗ್ರಹಣ, ನಿತಿಶ್ ಕುಮಾರ್ ಸಂಕಲನ, ಹಿನ್ನಲೆ ಸಂಗೀತ ಸೂರಜ್ ಮಹಾದೇವ್ ಒದಗಿಸಿದ್ದಾರೆ.

‘ಪರಿಧಿ’ ಚಿತ್ರದಲ್ಲಿ ರಾಜ್ ಕಿರಣ್, ದಿವ್ಯ, ನಿಶ, ಅಮರನಾಥ್, ಚಂದ್ರಶೇಖರ್, ಭದ್ರಾವತಿ ಶ್ರೀನಿವಾಸ್ ಹಾಗೂ ಮಂಜುಳ ಅಭಿನಯ ನೀಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com