ಅತೀ ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ ಪಂಖುರಿ

Published on

364 Views

ದೋಸ್ತಿ ಆನಂದ್ ಅವರು ಹೊಸ ನಿರ್ದೇಶನ ಮಾಡಿರುವ
ಪಂಖುರಿ ಚಿತ್ರವು ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಕೋರೋನಾ
ದಿಂದಾಗಿ ಚಿತ್ರಮಂದಿರಗಳಿಗೆ ಲಾಕ್ ಡೌನ್ ಮುಂದುವರೆದಿದ್ದು,
ಚಿತ್ರಮಂದಿರಗಳನ್ನು ತೆರೆಯಲಾರಂಭಿಸಿದ ನಂತರ ಈ ಚಿತ್ರವು
ತೆರೆಗೆ ಬರಲಿದೆ. ಆನಂದ್ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ
ಮಾಡಿರುವ ಈ ಚಿತ್ರದ ಮೂಲಕ ಶಾರದ ರೆಡ್ಡಿ ಹಾಗೂ ಶಶಿ ಶೇಖರ್
ಎಂಬ ಯುವ ಪ್ರತಿಭೆಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಪಕೃತಿ ಪಿಕ್ಚರ್ಸ್ ಬ್ಯಾನರ್ ನವರು ಹಾಗೂ ಸೂಪರ್ ಸ್ಟಾರ್ ಮ್ಯಾಗಜೀನ್
ಅವರ ಸಹಯೋಗದೊಂದಿಗೆ ಈ ಚಿತ್ರವನ್ನು ನಿರ್ಮಾಣಮಾಡಿದ್ದಾರೆ.
ಚಂದ್ರು ಓಬಯ್ಯ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ‌.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com