ಕನ್ನಡ ಚಿತ್ರರಂಗದ ಸಹ ಮತ್ತು ಸಹಾಯಕ ನಿರ್ದೇಶಕರಿಗೆ ಪಿ. ವಾಸು ಸಹಾಯ

Published on

434 Views

ವಿಶ್ವವೇ ಕೊರೋನ ಸಂಕಷ್ಟದಲ್ಲಿದೆ. ಇಂತಹ ಸಮಯದಲ್ಲಿ ಮಾನವೀಯತೆ ಅನ್ನೋದು ಎಲ್ಲರಲ್ಲೂ ಹೊರಬರಬೇಕು. ಸಾಕಷ್ಟು ಕಲಾವಿದರು, ಸಂಘ ಸಂಸ್ಥೆಗಳು, ಬ್ಯುಸಿನೆಸ್ ಮ್ಯಾನ್ ಗಳು, ಟ್ರಸ್ಟ್ ಗಳು ಮುಂದೆ ಬಂದು ಸಹಾಯ ಮಾಡುತ್ತಿದ್ದಾರೆ. ಒಂದೂವರೆ ವರ್ಷದಿಂದ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟ ಎದರಿಸುತ್ತಿರುವ ಕನ್ನಡ ಚಿತ್ರರಂಗದ ಸಹ ಮತ್ತು ಸಹಾಯಕ ನಿರ್ದೇಶಕರಿಗೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪಿ ವಾಸು ಅವರು 1ಲಕ್ಷ ಧನ ಸಹಾಯ ಮಾಡುವ ಮೂಲಕ ಸಹಾಯಕ್ಕೆ ನಿಂತಿದ್ದಾರೆ.

ಪಿ ವಾಸು ಅವರು ತಮ್ಮ ಸಹ ನಿರ್ದೇಶಕರಾದ ಲಿಂಗರಾಜು ಇತಿಹಾಸ ಅವರಿಂದ ಮಾಹಿತಿ ಪಡೆದು, ಕರ್ನಾಟಕ ಚಲನಚಿತ್ರ ಸಹ ಮತ್ತು ಸಹಾಯಕ ನಿರ್ದೇಶಕರ ಸಂಘಕ್ಕೆ ಹಣ ತಲುಪಿಸಿದ್ದಾರೆ. ಮೂಲತಃ ತಮಿಳಿನವರಾದ ಪಿ ವಾಸು ಅವರಿಗೆ ಕನ್ನಡ ಚಿತ್ರರಂಗದ ಮೇಲೆ ಅಪಾರ ಗೌರವ. ರಾಜ್ ಕುಮಾರ್ ವಿಷ್ಣುವರ್ಧನ್ ಅಂತ ಮಹಾನ್ ಕಲಾವಿದರಿಗೆ ಆಕ್ಷನ್ ಕಟ್ ಹೇಳಿರುವ ಪಿ ವಾಸು ಅವರು 60ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಸೇರಿದಂತೆ ತಮಿಳು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಸಾಧನೆ ಮಾಡಿ, ಭಾರತೀಯ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.

ಎಲ್ಲರ ಬಳಿ ದುಡ್ಡಿರುತ್ತೆ, ಆದರೆ ದುಡ್ಡು ಕೊಟ್ಟು ಸಹಾಯ ಮಾಡುವ ಮನಸ್ಸಿರಲ್ಲ. ಆ ಕೊಡುವ ಮನಸ್ಸು ವಾಸು ಅವರಲ್ಲಿ ಅಪಾರ ಇದೆ. ನಮ್ ಚಿತ್ರರಂಗದ ಸಹ ಮತ್ತು ಸಹಾಯಕ ನಿರ್ದೇಶಕರಿಗೆ ಸಹಾಯ ಮಾಡಿದ ವಾಸು ಅವರಿಗೆ ನಮ್ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com