ಹೊಸತನದ ಅಂತರ್ಗತ ಕಿರುಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್

Published on

606 Views

ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಅಂತರ್ಗತ ಅನ್ನೋ ಕಿರುಚಿತ್ರ ಸಾಕಷ್ಟು ಪ್ರಶಂಸೆ ಪಡೆಯುತ್ತಿದೆ. ಉದಯ್ ಕುಮಾರ್ ನಿರ್ದೇಶನ, ಅಕ್ಷಯ್ ಶೆಟ್ಟಿ ಕಥೆ, ಸಂತೋಷ್ ಕುಮಾರ್ ಕ್ಯಾಮರಾ ವರ್ಕ್, ಹೇಮಂತ್ ಹಾಗೂ ಎಸ್ ಪಿಎಸ್ ಸ್ಟುಡಿಯೋ ಮ್ಯೂಸಿಕು, ಅನುರಂಜನ್ ಹಾಗೂ ನವೀನ್ ಗೌಡ ಎಡಿಟಿಂಗ್, ಶ್ರವಣ್ ರಾಮಕೃಷ್ಣ, ಸಂತೋಷ್ ಕುಮಾರ್ ಶೆಟ್ಟಿ, ಕೆ. ಕಾರ್ತಿಕ್ ಹಾಗೂ ಭವ್ಯ ನಟನೆ‌ ಹೀಗೆ ಎಲ್ಲಾ ವಿಭಾಗದಲ್ಲೂ ಸೈ ಎನಿಸಿಕೊಂಡಿದೆ. ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣನವರ್ ಹಾಗೂ ನಿರ್ಮಾಪಕ ಬಾ.ಮಾ. ಹರೀಶ್, ನಟ ವಿಶ್ವ, ಮಮತಾ ರಾವತ್ ಸೇರಿದಂತೆ ಹಲವರು ಅಂತರ್ಗತ ಕಿರುಚಿತ್ರಕ್ಕೆ ಶಬ್ಬಾಸ್ ಗಿರಿ ಕೊಟ್ಟಿದ್ದಾರೆ.

ಈ ಕಿರುಚಿತ್ರಕ್ಕೆ ಶ್ರವಣ್ ರಾಮಕೃಷ್ಣ ಅವರೇ ಬಂಡವಾಳ ಹೂಡಿದ್ದು, ದೊಡ್ಡ ಸಿನಿಮಾ ಮಾಡುವ ಕೆಲಸಕ್ಕೂ ಮುನ್ನುಡಿ ಬರೆದಿದ್ದಾರೆ .

Copyright ©2026 . All Rights Reserved. privacy | terms Whatsapp: 9538193653 Email: hello@flixoye.com