ಆರೆಂಜ್ ಸಿನೆಮಾ ಇನ್ಸೈಡ್ ಔಟ್
ಅಂಗಡಿಯಲ್ಲಿ ಎಷ್ಟೋ ಬಾರಿ ತಾಜಾದಂತೆ ಕಂಡ ಕಿತ್ತಳೆ ಮನೆಯಲ್ಲಿ ಸಿಪ್ಪೆ ತೆರೆದಾಗ ಮರಗಟ್ಟಿರುತದ್ದೇ. ಇದು ಹಾಗೆ ಪೋಸ್ಟರ್ ಮೇಲೆ ಮಿನುಗುವ ಆರೆಂಜು ಪರದೆ ಮೇಲೆ ಅಷ್ಟಾಗಿ ಮಿನುಗದು .ಹಳೆಕೊಂಡಿಗೆ ಹೊಸ ದಾರ ಕಟ್ಟಿ ಗಟ್ಟಿ ಮಾಡಿ ಬಿಡಲಾಗಿದೆ.
ಸುಮಾರು ದಿವಸದ ನಂತರ ಸ್ಟಾರ್ ಗಳ ಕಟ್ ಔಟ್ ಕಾಣುತ್ತಿರುವ ಥಿಯೇಟರ್ ಮುಖದಲ್ಲಿ ಮಂದಹಾಸವಿದೆ. ಕನ್ನಡ ಮಟ್ಟಿಗೆ ದೊಡ್ಡ ಸ್ಟಾರ್ ಗಣೇಶ್.ಇಡೀ ಚಿತ್ರದುದ್ದಕ್ಕೂ ಪಾದರಸದಂತೆ ಇರುವ ಗಣೇಶ್ ರಂಜಿಸುತ್ತಾರೆ.ಚಮಕ್ ನ ಗುಂಗಲ್ಲಿ ಥಿಯೇಟರ್ ಗೆ ಬರುವವರಿಗೆ ಕೊಂಚ ನಿರಾಸೆ ಕಾದಿದೆ.
ಕಥೆಯಲ್ಲಿ ಹೊಸತೇನ ಇಲ್ಲದಿದ್ದರೂ,ಚಿತ್ರಕಥೆಯಲ್ಲಿ ವೇಗವಿದೆ.ನಾಯಕ ಮಾಡೋ ಕಳ್ಳತನದ ಸಮರ್ಥ ನೆಯೊಂದಿಗೆ ಶುರುವಾದ ಸಿನೆಮಾದಲ್ಲಿ ಇಂಟರ್ವಲ್ ತಲುಪುವುದು ತಿಳಿಯದಷ್ಟು ವೇಗವಿದೆ, ಹಾಸ್ಯವಿದೆ. ಎರಡನೇ ಭಾಗದಲ್ಲಿ ಕೊಂಚ ವೇಗ ಕಳೆದುಕೊಂಡು “ಇತರರ ಒಳ್ಳೆಯದಕ್ಕೆ ಮಾಡಿದ ಕಳ್ಳತನ ಕಳ್ಳತನವಲ್ಲ” ಎಂಬ ಸಂದೇಶದಿಂದ ಮುಕ್ತಾಯವಾಗುತದ್ದೇ.
ಜನರನ್ನು ನಗಿಸುವ ತನ್ನ ಉದ್ದೇಶದಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ .ಸಂಭಾಷಣೆ ಇಂದ ಅಷ್ಟಾಗಿ ನಗಿಸದಿದ್ದರು ಸನ್ನಿವೇಶಗಳಿಂದ ನಗಿಸುವುದನ್ನು ಸಾಧ್ಯವಾಗಿಸಿದ್ದಾರೆ. ಹಾಡಿಗೂ ಸನ್ನಿವೇಶಕ್ಕೂ ಸಂಬಂಧವೇ ಇಲ್ಲದ ಹಳೆಯ ಸೂತ್ರವನ್ನು ನೆಚ್ಚಿಕೊಂಡಿದ್ದಾರೆ.
ಸಂತೋಷ್ ಅವರ ಕ್ಯಾಮರಾ ಕೆಲಸ ಅಚ್ಚುಕಟ್ಟು.ಜೈಲು ಹಾಗೂ ದೇವಸ್ಥಾನದಲ್ಲಿ ನೆಡೆವ ಮಾರಾಮಾರಿ ದೃಶ್ಯದಲ್ಲಿ ಅವರ ಕೈಚಳಕ ಕಂಗೊಳಿಸಿದೆ.
ಜೂಮ್ ಅಲ್ಲಿ ಇರುವ ತಮನ್ ಪ್ರಭಾವ ಇಲ್ಲಿ ಒಂದು ಚೂರು ಕಾಣಸಿಗುವುದಿಲ್ಲ. ಪ್ರಿಯ ಆನಂದ್ ಕೊಟ್ಟ ಪಾತ್ರಕ್ಕೆ ನ್ಯಾಯದಕ್ಕಿಸಿದ್ದಾರೆ.ಸಹ ಕಲಾವಿದರು ಅಚ್ಚುಕಟ್ಟು. ಸಾಧುಕೋಕಿಲ ಚಿತ್ರದುದ್ದಕ್ಕೂ ಇದ್ದು ನಗಿಸಲು ಸಫಲವಾಗಿದ್ದಾರೆ.ಪರದೆ ಮೇಲೆ ಪಾದರಸದಂತಿರುವ ಗಣೇಶ್ ಮೌ ಥೈ ಪ್ರಭಾವದಿಂದನೋ ಏನೋ ಫೈಟ್ಗಳಲ್ಲಿ ಅಬ್ಬರಿಸಿದ್ದಾರೆ. ಎಂದಿನ ಗಣೇಶ್ ಚಿತ್ರಗಳಲ್ಲಿರುವ ಗುನುಗುವಂತ ಹಾಡುಗಳು ಇಲ್ಲಿ ಕಾಣಸಿಗದು. ಮುಂಗಾರು ಮಳೆಯನ್ನು ನೆನಪಿಸೋ ಒಂದು ಸನ್ನಿವೇಶದಲ್ಲಿ ನಾಯಕಿಯೇ ಕುಡಿದ ನಾಯಕನನ್ನು ಕಾರ್ ಅಲ್ಲಿ ಕರೆದೊಯ್ದುವ ಸನ್ನಿವೇಶದಲ್ಲಿ ಅವರ ಮನಸಲ್ಲಿ ಇರೋ ಗೊಂದಲಗಳ ಬಗ್ಗೆ ಒಂದು ಮೇಲೋಡಿ ಹಾಡು ಇಡುವ ಬದಲು ಸಂಬಂಧವೇ ಇಲ್ಲದ ಒಂದು ಹಾಡನ್ನು ಇಟ್ಟು ಇದ್ದ ಅವಕಾಶವನ್ನು ಕೈಚೆಲ್ಲಿದ್ದಾರೆ.
ಭಾವನೆಗಳನ್ನು ಇಂಟೆನ್ಸ್ ಮಾಡೋದರಲ್ಲಿ ನಿರ್ದೇಶಕರು ಸಂಪೂರ್ಣವಾಗಿ ಸೋತಿದ್ದಾರೆ.ಅಜ್ಜಿ ಹಾಗೂ ನಾಯಕನ ನಡುವೆ ಇರುವುದು ಒಂದೇ ದೃಶ್ಯ ಆದ್ದರಿಂದ ನೆನಪಿನ ಶಕ್ತಿ ಇಲ್ಲದಿರೋ ಅಜ್ಜಿ ನಾಯಕನನ್ನು ನೆನಪಿಡುವ ದೃಶ್ಯ ಜನರಿಗೆ ಕನೆಕ್ಟ್ ಆಗೋದರಲ್ಲಿ ಸೋತಿದೆ.ನಾಯಕಿ ಹಾಗೂ ಪ್ರಿಯಕನ ಮದ್ಯ ಇದ್ದ ಮನಸ್ತಾಪವನ್ನು ಸರಿಯಾಗಿ ತೋರಿಸುವಂತ ಯಾವುದೇ ದೃಶ್ಯವಿಲ್ಲ ಆದ್ದರಿಂದ ಅಷ್ಟು ಪ್ರೀತಿಸಿ ಮನೆಗೆ ಕರೆತರುವ ಪ್ರಿಯಕರನನ್ನು ಬಿಡಲು ಯಾವುದೇ ಪ್ರಬಲ ಕಾರಣ ಕಾಣುವುದಿಲ್ಲ. ಹೆಚ್ಚು ಬುದ್ಧಿಗೆ ಕೆಲಸ ಕೊಡದೆ ನೋಡುವಂತ ಚಿತ್ರ.
ಕೊನೆಯದಾಗಿ *** ಸ್ಟಾರ್ ಸಿನೆಮಾ ಮನೆಮಂದಿಯೊಂದಿಗೆ ನೋಡ ಬಹುದು.