ಗುಹೆಯಲ್ಲಿ ಒಂದು ದಿನ

Published on

465 Views

*ಗುಹಲೋ ಒಕ ರೋಜು* ತೆಲುಗು ಭಾಷೆಯಲ್ಲಿ *ಸಲೀಂ* ಅವರು ಪುಟ್ಟ ಮಕ್ಕಳಿಗಾಗಿ ರಚಿಸಿರುವ ಆಸಕ್ತಿಕರವಾದ ಪುಟ್ಟ ಸಚಿತ್ರ ಕಥಾ ಪುಸ್ತಕ. 2019ರಲ್ಲಿ *ತಾನಾ* (TANA : Telugu Association of North America) ಸಂಸ್ಥೆಯಿಂದ *ಉತ್ತಮ ಮಕ್ಕಳ ಸಚಿತ್ರ ಕಥಾ ಪ್ರಶಸ್ತಿ* ಈ ಕೃತಿಗೆ ಲಭಿಸಿದೆ.

ಇದನ್ನು *ಗುಹೆಯಲ್ಲಿ ಒಂದು ದಿನ* ಎಂಬ ಹೆಸರಿನಲ್ಲಿ ನಾನು ಕನ್ನಡಕ್ಕೆ ಅನುವಾದಿಸಿದ್ದು, ಅತೀ ಶೀಘ್ರದಲ್ಲೇ ಪ್ರಕಟವಾಗಿ ತಮ್ಮ ಕೈ ಸೇರಲಿದೆ. ಈ ಮೂಲಕ ಪುಟ್ಟ ಮಕ್ಕಳಿಗೊಂದು ಪುಟ್ಟ ಸಚಿತ್ರ ಕಥಾ ಪುಸ್ತಕ ನೀಡುವ ನನ್ನ ಕನಸು ನನಸಾಗುತ್ತಿದೆ. ಪುಸ್ತಕದ ಎಲ್ಲಾ ಪುಟಗಳನ್ನು ಆಕರ್ಷಕವಾದ ಬಣ್ಣಬಣ್ಣದ ಚಿತ್ರಗಳೊಂದಿಗೆ ಮುದ್ರಿಸಲಾಗುತ್ತಿದೆ.


ಖ್ಯಾತ ವ್ಯಂಗ್ಯಚಿತ್ರಕಾರರಾದ ಶ್ರೀ *ಗಂಗಾಧರ ಅಡ್ಡೇರಿ* ಅವರ ಸಾಂದರ್ಭಿಕ ಕಥಾ ಚಿತ್ರಗಳು ಈ ಪುಸ್ತಕದ ಸೊಗಸನ್ನು ಇಮ್ಮಡಿಗೊಳಿಸಿವೆ.

ನುರಿತ ಪುಸ್ತಕ ವಿನ್ಯಾಸಕರಾದ ಶ್ರೀ *ಎಸ್. ಕಲಾಧರ್* ಅವರು ಪುಸ್ತಕವನ್ನು ತುಂಬಾ ಸೊಗಸಾಗಿ ವಿನ್ಯಾಸಗೊಳಿಸಿದ್ದಾರೆ. ಇವರ ಮಗ ಚಿ|| *ನಿನಾದ್ ಎಸ್.ಕೆ* ಬರೆದ ಚೆಂದದ ರೇಖಾಚಿತ್ರಗಳನ್ನು ಪುಸ್ತಕದಲ್ಲಿ ಬಳಸಿಕೊಳ್ಳಲಾಗಿದೆ.

ಪುಸ್ತಕದ ಪ್ರಕಟಣೆಯ ಹಂತದಲ್ಲಿ ಎದುರಾದ ಹಣದ ಕೊರತೆಯನ್ನು ಕೆಲವು ಸಹೃದಯರ ಉದಾರವಾಗಿ ನೆರವು ನೀಡುವ ಮೂಲಕ ಸಮಸ್ಯೆಯನ್ನು ಹೋಗಲಾಡಿಸಿ ನನ್ನನ್ನು ಅಭಾರಿಯಾಗಿಸಿದ್ದಾರೆ.

ಈ ಬಹು ವ್ಯಯ ಪ್ರಯಾಸದ ಕನಸನ್ನು ನನಸಾಗಿಸುವಲ್ಲಿ ನನ್ನೊಡನೆ ಕೈ ಜೋಡಿಸಿದ ಎಲ್ಲಾ ಸಹೃದಯರಿಗೆ ನನ್ನ ಕೃತಜ್ಞತಾಪೂರ್ವಕವಾದ ಧನ್ಯವಾದಗಳು.

ಈ ಚೆಂದದ ಮಕ್ಕಳ ಸಚಿತ್ರ ಕಥಾ ಪುಸ್ತಕವನ್ನು ಕೊಂಡು ತಾವಷ್ಟೇ ಓದುವುದಲ್ಲದೆ ತಮ್ಮ ಮಕ್ಕಳಿಂದಲೂ ಓದಿಸುವ ಮೂಲಕ ನಮ್ಮೆಲ್ಲರ ಈ ಪ್ರಯತ್ನವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಈ ಮೂಲಕ ಪ್ರಾರ್ಥಿಸುತ್ತೇನೆ.

ಮುಂಗಡವಾಗಿ ಕಾಯ್ದಿರಿಸಬಯಸುವವರಿಗೆ ₹. 80/- ರೂಗಳ ಮುಖಬೆಲೆಯ ಪುಸ್ತಕವನ್ನು ವಿಶೇಷ ರಿಯಾಯಿತಿಯಲ್ಲಿ 60/- ರೂಗಳಿಗೆ (ಅಂಚೆಯ ವೆಚ್ಚ ಉಚಿತ) ನೀಡಲಾಗುತ್ತದೆ. ಪುಸ್ತಕವನ್ನು ರಿಜಿಸ್ಟರ್ಡ್ ಪ್ರಿಂಟೆಡ್ ಬುಕ್ ರೂಪದಲ್ಲಿ ಅಂಚೆಯ ಮೂಲಕ ಕಳುಹಿಸಲಾಗುತ್ತದೆ. ಪ್ರತಿಗಳಿಗಾಗಿ ಆಸಕ್ತರು ದಯವಿಟ್ಟು ಸಂಪರ್ಕಿಸಿ ಮೊ: 7892546523.

ಹಣವನ್ನು Google Pay/Phone Pe/PAYTM ಸಂಖ್ಯೆ: 7892546523 ಮೂಲಕ ಪಾವತಿಸಬಹುದು.

ಧನ್ಯವಾದಗಳೊಂದಿಗೆ,

ನಿಮ್ಮಯ,
ಧನಪಾಲ ನಾಗರಾಜಪ್ಪ, ನೆಲವಾಗಿಲು
26-02-2020

Copyright ©2026 . All Rights Reserved. privacy | terms Whatsapp: 9538193653 Email: hello@flixoye.com