‘ಒಡೆಯ’ ನ ಆರ್ಭಟ…!!!

Published on

589 Views

ಈ ವರ್ಷ ತೆರೆಕಂಡ ದರ್ಶನ್ ಅಭಿನಯದ ಯಜಮಾನ ಮತ್ತು ಕುರುಕ್ಷೇತ್ರ ಸಿನಿಮಾಗಳು ಶತದಿನೋತ್ಸವವನ್ನು ಬಾರಿಸಿದ್ದು, ಇದೀಗ ಬಿಡುಗಡೆಯಾದ ಮತ್ತೊಂದು ಸಿನಿಮಾ ಒಡೆಯ ಕೂಡ ಶತದಿನೋತ್ಸವ ಆಚರಿಸುವ ನಿರೀಕ್ಷೆಯಲ್ಲಿದೆ.

‘ಒಡೆಯ’ ದರ್ಶನ್ ಅಭಿನಯದ ಈ ವರ್ಷದ ಕೊನೆಯ ಸಿನಿಮಾ ಆಗಿದ್ದು, ಅದ್ದೂರಿಯಾಗಿ ತೆರೆ ಕಂಡಿದೆ. ಈಗಾಗಲೇ ಥಿಯೇಟ್‌ರ್ ಹೌಸ್ ಫುಲ್ ಆಗಿದ್ದು, ‘ದರ್ಶನ್ ಮತ್ತು ಎಂ.ಡಿ.ಶ್ರೀಧರ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ಇದಾಗಿದೆ. ಸನಾ ತಿಮ್ಮಯ್ಯ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ. ಸಂದೇಶ್ ಬ್ಯಾನರ್‌ನಲ್ಲಿ ಈ ಚಿತ್ರ ಮೂಡಿಬಂದಿದ್ದು, ಇದೊಂದು ಪಕ್ಕಾ ಅಭಿಮಾನಿಗಳ ಸಿನಿಮಾವಾಗಿದೆ.

ಐದು ವರ್ಷಗಳ ಹಿಂದೆ ತಮಿಳಿನಲ್ಲಿ ಅಜಿತ್ ಅಭಿನಯದ ‘ವೀರಂ’ ಸಿನಿಮಾದ ರಿಮೇಕ್ ಇದಾಗಿದ್ದರೂ ಕನ್ನಡದ ಸೊಗಡಿಗೆ ತಕ್ಕಂತೆ ಮತ್ತು ದರ್ಶನ್ ಅಭಿಮಾನಿಗಳಿಗೆ ಇಷ್ಟವಾಗುವಂತೆ ಶ್ರೀಧರ್ ತಯಾರು ಮಾಡಿದ್ದು, ದರ್ಶನ್ ಅವರ ಅಬ್ಬರಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ!
ಇನ್ನು ಚಿತ್ರದ ಯಾವ ಹಾಡುಗಳು ಅಷ್ಟಾಗಿ ಮನಸ್ಸಿನಲ್ಲಿ ಉಳಿಯುವಂತಿಲ್ಲವಾದರೂ, ಸಿನಿಮಾ ಮಾತ್ರ ಭರ್ಜರಿಯಾಗಿ ರಾಜ್ಯಾದ್ಯಂತ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಆದರೆ ಈ ಒಡೆಯನ ಆರ್ಭಟಕ್ಕೆ ಕನ್ನಡದ ಸಾಕಷ್ಟು ಸಿನಿಮಾಗಳು ಥಿಯೇಟರ್ ನಿಂದ ಎತ್ತಂಗಡಿಯಾಗಿವೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com