ಸ್ಯಾಂಡಲ್ ವುಡ್ ಅಂಗಳದಲ್ಲಿ ನಿರೀಕ್ಷೆ ಹುಟ್ಟಿಸಿದ ‘ನಿನ್ನ ಸನಿಹಕೆ’

Published on

587 Views

‘ನಿನ್ನ ಸನಿಹಕೆ’ ಚಿತ್ರವನ್ನು ಪ್ರಪ್ರಥಮ ಬಾರಿಗೆ ನಿರ್ದೇಶಿಸಿ, ನಟಿಸಿರುವ ನಟ ಸೂರಜ್ ಗೌಡರವರ ಯೂಥ್ ಫುಲ್ ಲವ್ ಸ್ಟೋರಿ ‘ನಿನ್ನ ಸನಿಹಕೆ’. ಈ ಚಿತ್ರದಲ್ಲಿ ದೊಡ್ಮನೆಯ ಕುಡಿ ಧನ್ಯಾರಾಮ್ ಕುಮಾರ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ರಘು ದೀಕ್ಷಿತ್ ಸಂಗೀತ‌ ಸಂಯೋಜನೆ ಮಾಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಕನ್ನಡ ಸಿನಿಪ್ರಿಯರ ಮನಸೆಳೆದಿದೆ.


ಇತ್ತೀಚೆಗೆ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿ, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದ್ದಾರೆ. ಸಹೋದರಿಯ ಮಗಳ ಚೊಚ್ಚಲ ಚಿತ್ರಕ್ಕೆ ಪುನೀತ್ ರಾಜ್‍ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದು, ಶುಭಕೋರಿದ್ದಾರೆ. ಏಪ್ರಿಲ್ 16ಕ್ಕೆ ತೆರೆಗೆ ಬರಲು ತಯಾರಾಗಿರುವ ‘ನಿನ್ನ ಸನಿಹಕೆ’ ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿರೋ ಯೂಥ್ ಫುಲ್ ಎಂಟ್ರಟೈನರ್ ಚಿತ್ರ ‘ನಿನ್ನ ಸನಿಹಕೆ’. ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com