ಹೊಸ ವರ್ಷದಲ್ಲಿ ಹೊಸ ಕಾರ್ಯಕ್ರಮಗಳು “ಉದಯಕಾಮಿಡಿ”ಯಲ್ಲಿ
ಕಳೆದ ಒಂಭತ್ತು ವರ್ಷದಿಂದ ವಿಭಿನ್ನ ಹಾಸ್ಯ ಕಾರ್ಯಕ್ರಮಗಳ ಮೂಲಕ ಕರ್ನಾಟಕದಜನತೆಯನ್ನು ನಗಿಸುತ್ತಾ ಸಂತೋಷವಾಗಿಡುತ್ತಿರುವಉದಯಕಾಮಿಡಿತಂಡ ಈ ಹೊಸ ವರ್ಷದಲ್ಲಿ ಮತ್ತಷ್ಟು ಹೊಸ ಕಾರ್ಯಕ್ರಮಗಳ ಮೂಲಕ ಜನರನ್ನು ಮತ್ತಷ್ಟು ನಗೆಗಡಲಲ್ಲಿ ತೇಲಿಸಲು ಸನ್ನದ್ಧವಾಗಿದೆ.
ಸಂಕ್ರಾಂತಿಕಾಮಿಡಿಉತ್ಸವ :
ಯಾವಾಗಲೂ ವಿಭಿನ್ನಕಾರ್ಯಕ್ರಮದ ಮೂಲಕ ಗಮನ ಸೆಳೆವ ಉದಯಕಾಮಿಡಿ ಈ ಬಾರಿಯ ಸಂಕ್ರಾಂತಿ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಸಾಮಾನ್ಯವಾಗಿಯಾವುದೇಕಾರ್ಯಕ್ರಮವನ್ನು ಮಾಧ್ಯಮದವರುಯೋಜಿಸುವುದು ಸಾಮಾನ್ಯ. ಆದರೆ ಈ ಬಾರಿ ಹೊಸಕೋಟೆಯಕೆ.ಸತ್ಯಾವರಗ್ರಾಮಸ್ಥರು ಸ್ವಪ್ರೇರಣೆಯಿಂದ “ಸಂಕ್ರಾಂತಿಕಾಮಿಡಿಉತ್ಸವ” ಎಂಬ ವಿಭಿನ್ನಕಾರ್ಯಕ್ರಮವನ್ನು ಆಯೋಜಿಸಿರುವುದು ವಿಶೇಷ. ಉದಯಕಾಮಿಡಿತಂಡದ ಹಾಸ್ಯಕಲಾವಿದರು ಕೆ.ಸತ್ಯಾವರಗ್ರಾಮಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ನಕ್ಕು ನಲಿದು ಮೋಜುಮಸ್ತಿ ಮಾಡಿದ್ದುಕಾರ್ಯಕ್ರಮ ಸಾಕಷ್ಟು ವಿಭಿನ್ನವಾಗಿ ಮೂಡಿಬಂದಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತಜನವರಿ 15ರಂದು ಪ್ರಸಾರವಾಗಲಿರುವ ಸಂಕ್ರಾಂತಿಕಾಮಿಡಿಉತ್ಸವಕಾರ್ಯಕ್ರಮವು ನೋಡುಗರನ್ನುಕಂಡಿತ ನಗೆಗಡಲಲ್ಲಿ ತೇಲಿಸಿ ಭರಪೂರ ಮನರಂಜನೆ ನೀಡಲಿರುವುದು ದಿಟ.
ಹ್ಯಾಪಿ ಫ್ಯಾಮಿಲಿ:
2018ರ ಈ ವರ್ಷದಲ್ಲಿಉದಯಕಾಮಿಡಿತಂಡದಿಂದ ಮೂಡಿ ಬರಲಿರುವ ಮತ್ತೊಂದು ವಿಭಿನ್ನಕಾರ್ಯಕ್ರಮವೇ“ಹ್ಯಾಪಿ ಫ್ಯಾಮಿಲಿ” ಇಂದಿನ ಆಧುನಿಕಯುಗದಲ್ಲಿ ನಗರ ಭಾಗಗಳಲ್ಲಿ ಅವಿಭಕ್ತಕುಟುಂಬ ಎಂಬ ಪರಿಕಲ್ಪನೆ ಮಾಯವಾಗಿದೆ. ಕೇವಲ ನಾಲ್ಕು ಜನಇರುವಕುಟುಂಬವನ್ನುತುಂಬುಕುಟುಂಬ ಎನ್ನುವ ಪ್ರಮೇಯಉಂಟಾಗಿದೆ. ಆದರೆ ಈ ಕಾಲದಲ್ಲೂ ಕೆಲವರು ಅವಿಭಕ್ತಕುಟುಂಬದಲ್ಲಿ ನಂಬಿಕೆ ಇಟ್ಟಿದ್ದುಎಲ್ಲರೂಒಟ್ಟಿಗೆ ಬದುಕುತ್ತಿದ್ದಾರೆ. ಸುಖೀ ಜೀವನಅನುಭವಿಸುತ್ತಿದ್ದಾರೆ. ಇಂತಹ ಅವಿಭಕ್ತ ಸುಖೀ ಕುಟುಂಬಕ್ಕೆ ಭೇಟಿ ನೀಡಿ ಮನೆಮಂದಿಯಜತೆ ನಕ್ಕುನಲಿದುಎಲ್ಲರಿಗೂ ವಿವಿಧ ಕ್ರೀಡೆಗಳನ್ನು ಆಡಿಸಿ ಮೋಜುಮಸ್ತಿ ಮಾಡಿತುಂಬುಕುಟುಂಬದಲ್ಲಿರುವಖುಷಿಯನ್ನುಜನರಿಗೆ ಪರಿಚಯ ಮಾಡಿಕೊಡುವುದು ಈ ಕಾರ್ಯಕ್ರಮದಉದ್ದೇಶವಾಗಿದ್ದು, ಈ ಕಾರ್ಯಕ್ರಮಜನವರಿ 22 ರಿಂದ ಸಂಜೆ 7ಕ್ಕೆ ನಿಮ್ಮಉದಯಕಾಮಿಡಿಯಲ್ಲಿ ಪ್ರಸಾರವಾಗಲಿದೆ.
ಹಳ್ಳಿಹಬ್ಬ
ಉದಯಕಾಮಿಡಿತಂಡದ ಯಶಸ್ವಿ ಕಾರ್ಯಕ್ರಮಗಳಲ್ಲಿ “ಹಳ್ಳಿಹಬ್ಬ” ಸಹ ಒಂದು. ಹಳ್ಳಿಯ ಸೊಗಡು ಹಾಗೂ ಅಲ್ಲಿನ ಸಂಸ್ಕøತಿಯನ್ನು ಬಿಂಬಿಸುವ ಸಲುವಾಗಿ ಈ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು. ಕಳೆದ ಒಂದು ವರ್ಷದಿಂದಅದ್ದೂರಿಯಾಗಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮಗ್ರಾಮೀಣ ಸೊಗಡನ್ನು ಬಿಂಬಿಸುವುದರಜತೆಗೆಅಲ್ಲಿನಜನರನ್ನು ಮೋಜುಮಸ್ತಿನಲ್ಲಿ ತೊಡಗಿಸಿ ನಕ್ಕುನಲಿಸುವಲ್ಲೂ ಯಶಸ್ವಿಯಾಗಿತ್ತು. ಅಲ್ಲದೆ ಪ್ರತಿ ಭಾನುವಾರ ಬೆಳಗ್ಗೆ 8 ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮವುಜನಪ್ರಿಯಕಾರ್ಯಕ್ರಮವಾಗಿರಾಜ್ಯದಜನರಜನಮಾನಸದಲ್ಲೂ ಸ್ಥಾನಪಡೆಯಿತು.
“ಹಳ್ಳಿಹಬ್ಬ” ಕಾರ್ಯಕ್ರಮಈವರೆಗೆರಾಜ್ಯದಎಂಟು ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ. ಹಾಸನ ಜಿಲ್ಲೆಯ ಮಡೆನೂರು, ತುಮಕೂರುಜಿಲ್ಲೆಯ ಬೆಳ್ಳಾವಿ ಹಾಗೂ ಅರೆಯೂರು, ಚಿತ್ರದುರ್ಗದ ಚಿಕ್ಕಗೊಂಡನಹಳ್ಳಿ, ಮಂಡ್ಯದ ಹೊನ್ನಾವರ, ಮೈಸೂರಿನ ಹೆಚ್‍ಡಿಕೋಟೆ, ಶಿವಮೊಗ್ಗದ ಶಂಕರಘಟ್ಟ, ಚಿಕ್ಕಮಗಳೂರಿನ ಕಡೂರು ಹಾಗೂ ಮಾಗಡಿಯತಿಪ್ಪಸಂದ್ರ ಗ್ರಾಮಗಳಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ಉತ್ತರಕರ್ನಾಟಕ ಸೇರಿದಂತೆರಾಜ್ಯದಎಲ್ಲಾ ಜಿಲ್ಲೆಗಳಲ್ಲೂ ಈ ಕಾರ್ಯಕ್ರಮವನ್ನುಆಯೋಜಿಸುವಉದ್ದೇಶವಿದೆ.
ಇದರಜತೆಗೆಇನ್ನಷ್ಟು ಹೊಸ ಹೊಸ ವಿಭಿನ್ನ ಕಾರ್ಯಕ್ರಮಗಳು ಹಾಗೂ ನಿಮ್ಮ ನೆಚ್ಚಿನ ನಾಯಕ ನಟರ ಹೊಸ ಕಾಮಿಡಿ ದೃಶ್ಯಗಳು ಪ್ರಸಾರವಾಗಲಿದೆ.