ನಿಮ್ಮನ್ನು ನಕ್ಕು ನಗಿಸಲು ಜೊತೆಯಾಗಿ ಬರುತ್ತಿದ್ದಾರೆ ಕರಿಸುಬ್ಬು ಹಾಗೂ ರಾಕ್ ಲೈನ್ ಸುಧಾಕರ್

Published on

233 Views

ವಿಕ್ಟರಿ ಮೂವಿ ಮೇಕರ್ ಬ್ಯಾನರ್ ಅಡಿಯಲ್ಲಿ ಯುವ ನಿರ್ದೇಶಕರಾದ
ರಘು ಅಪ್ಪು ಅವರು ಪ್ರೊಡಕ್ಷನ್ಸ್ ನಂ 1ಹೆಸರಿನ ಚಿತ್ರವನ್ನು ನಿರ್ದೇಶನ
(ಶೀರ್ಷಿಕೆ ಇನ್ನು ಅಂತಿಮವಾಗಿಲ್ಲ) ಮಾಡಲು ಸಿದ್ದತೆ ನಡೆಸಿದ್ದಾರೆ. ಈ
ಚಿತ್ರದ ಮೂಲಕ ಕನ್ನಡದ ಹೆಸರಾಂತ ಕಲಾವಿದರಾದ ಕರಿಸುಬ್ಬು ಹಾಗೂ
ರಾಕ್ ಲೈನ್ ಸುಧಾಕರ್ ಅವರು ಇದೇ ಮೊದಲ ಬಾರಿಗೆ ಪ್ರಮುಖ
ಪಾತ್ರಗಳಿರು ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ. ಇದೊಂದು
ಹಾಸ್ಯ ಕಥೆಯಿರುವ ಚಿತ್ರವಾಗಿದ್ದು ಕಥೆ ಈ ಇಬ್ಬರು ನಟರ ಸುತ್ತ ಸುತ್ತುತ್ತ
ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದೆಯಂತೆ. ಹಲವು ಚಿತ್ರಗಳಲ್ಲಿ ಸಹ
ನಿರ್ದೇಶಕರಾಗಿ ಕೆಲಸಮಾಡಿರುವ ರಘು ಅಪ್ಪು ಅವರು ಇದೇ ಮೊದಲ
ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.
ಈ ಚಿತ್ರದ ಟೀಸರ್ ಅನ್ನು ನೆನ್ನೆ ನಿರ್ದೇಶಕರು ಬಿಡುಗಡೆ ಮಾಡಿದ್ದಾರೆ.
ಮೇ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಟೀಸರ್ YouTube ನ
ಅವೇಸ್ ಆಡಿಯೋ ಚಾನಲ್ ನವರು ಬಿಡುಗಡೆ ಮಾಡಿದ್ದು ಈ ಕೆಳಗಿನ
ಲಿಂಕ್ ಕ್ಲಿಕ್ ಈ ಟೀಸರ್ ನೋಡಿ
https://youtu.be/_5x6eugfdho

Copyright ©2026 . All Rights Reserved. privacy | terms Whatsapp: 9538193653 Email: hello@flixoye.com