ಸ್ಯಾಂಡಲ್‌ವುಡ್ನಲ್ಲಿ ‘ಶಾಸನ’ ..!!

Published on

339 Views

ಸಾಲು ಸಾಲು ಸಿನಿಮಾಗಳು ಸೆಟ್ಟೇರುತ್ತಿದ್ದು, ಹೊಸಬರ ಸಿನಿಮಾಗಳು ಮುಹೂರ್ತ ಆಚರಿಸಿಕೊಳ್ಳುತ್ತಿವೆ. ಆ ಹೊಸಬರ ಸಾಲಿನಲ್ಲಿ ‘ಶಾಸನ’ ಚಿತ್ರದ ಮುಹೂರ್ತ ನಿನ್ನೆ ನಗರದ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ‘ಶಾಸನ’ ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ವಾಗಿದ್ದು ,ಇದರಲ್ಲಿ ಖಾಸಗಿ ಚಾನೆಲ್ ಸಿನಿಮಾ ವರದಿಗಾರ ಧನು ನಾಯಕ ಮತ್ತು ಖಳನಾಯಕನ ಶೇಡ್ ನಲ್ಲಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

ಈಗಾಗಲೇ ಕಿರುಚಿತ್ರ , ಕಿರುತೆರೆಯಲ್ಲಿ ಅಭಿನಯಿಸಿ ಅನುಭವವಿರುವ ಧನುವಿಗೆ ನಾಯಕನಾಗಿ ಇದು ಮೊದಲ ಸಿನಿಮಾ. ಹರ್ಷಿತಾ, ರಂಜಿತಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಉಳಿದ ತಾರಾಗಣದಲ್ಲಿ ಹಾಸ್ಯನಟ ಕೆಂಪೇಗೌಡ, ಕುರಿ ಸುನಿಲ್ , ಬ್ಯಾಂಕ್ ಜನಾರ್ದನ್ ಮುಂತಾದವರಿದ್ದಾರೆ. ಈ ಹಿಂದೆ ‘ ಚಿನ್ನದ ಗೊಂಬೆ’ ಚಿತ್ರ ನಿರ್ದೇಶನ ಮಾಡಿದ ಪಂಕಜ್ ಬಾಲನ್ ಈ ಚಿತ್ರದ ಚಿತ್ರಕಥೆ, ನಿರ್ದೇಶನ ಮಾಡಿದ್ದಾರೆ. ಮನುಶ್ರೀ ಮೂವೀ ಮೇಕರ್ಸ್ ಅಡಿಯಲ್ಲಿ ಚಿತ್ರ ಸೆಟ್ಟೇರಿದ್ದು, ಇನ್ನು ಈ ಚಿತ್ರಕ್ಕೆ ಆರ್.ವಿ ಲಕ್ಷ್ಮೀ ಬಂಡವಾಳ ಹೂಡಿದ್ದಾರೆ. ಆರ್. ಸಾಗರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಗುರುದತ್ತರವರ ಛಾಯಾಗ್ರಹಣ ವಿದ್ದು, ಕಾರ್ತಿಕ್ ವೆಂಕಟೇಶರವರ ಸಂಗೀತವಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com