ವೈವಾಹಿಕ ಜೀವನಕ್ಕೆ ಕಾಲಿಟ್ಟ ನೇಹಾ ಪಾಟೀಲ್

Published on

329 Views

ನಟಿ ನೇಹಾ ಪಾಟೀಲ್ ಇಂದು ಪ್ರಣವ್ ರೊಂದಿಗೆ ಶ್ರೀ ಬಸವೇಶ್ವರ ಸುಗ್ನನ ಕಲ್ಯಾಣ ಮಂಟಪದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಕುಟುಂಬದ ಮತ್ತು ಆಪ್ತರ ಸಮ್ಮುಖದಲ್ಲಿ ಇಂದು ವೈವಾಹಿಕ‌ ಜೀವನಕ್ಕೆ ‌ಕಾಲಿಟ್ಟ ನೇಹಾ ಪಟೀಲ್ ‘ಟೈಟ್ಲು ಬೇಕಾ’, ‘ಸಿತಾರಾ’, ‘ತಿಪ್ಪಜ್ಜಿ ಸರ್ಕಲ್’, ‘ಸ್ಲಂ’, ‘ಹುಲಿದುರ್ಗ’, ‘ವರ್ಧನ್’ ಸೇರಿದಂತೆ 15 ಸಿನಿಮಾಗಳು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಜನುಮದ ಜೋಡಿ’ ಸೀರಿಯಲ್ ನಲ್ಲೂ ಅಭಿನಯಿಸಿದ್ದಾರೆ. ಅದಲ್ಲದೇ ತೆಲುಗು‌ ಸಿನಿಮಾದಲ್ಲೂ ಅಭಿನಯಿಸಿ ಗುರುತಿಸಿಕೊಂಡಿದ್ದಾರೆ. ಮದುವೆ ನಂತರವೂ‌ ಸಿನಿಮಾರಂಗದಲ್ಲಿ ಮುಂದುವರೆಯುವ ಆಸೆ ಹೊಂದಿದ್ದಾರೆ ನೇಹಾ ಪಾಟೀಲ್. ಅವರ ವೈವಾಹಿಕ ಜೀವನ ಸುಖಕರವಾಗಿರಲಿ‌ ಎಂದು ಆಶಿಸೋಣ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com