ನೇಹಾ ಪಾಟೀಲ್ ಗೆ ಕೂಡಿ ಬಂದ ಕಂಕಣ ಭಾಗ್ಯ

Published on

682 Views

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ ಜನುಮದ ಜೋಡಿ’ ಧಾರಾವಾಹಿಯಲ್ಲಿ ಅಭಿನಯಿಸಿರುವ ನೇಹಾ ಕನ್ನಡದ ‘ವರ್ಧನ’ ,’ಸಂಯುಕ್ತ 2′, ‘ಸಿತಾರ’, ‘ಸ್ಮೈಲ್ ಪ್ಲೀಸ್’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ನೇಹಾ ಪಾಟೀಲ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅಕ್ಟೋಬರ್ 19ರಂದು (ಶುಕ್ರವಾರ) ನೇಹಾ ಪಾಟೀಲ್ ನಿಶ್ಚಿತಾರ್ಥ ನಡೆಯಲಿದೆ. ಇನ್ನು ಮೂರು ದಿನಗಳಲ್ಲಿ ಬೆಂಗಳೂರಿನ ಎಂಜಿನಿಯರ್ ಪ್ರಣವ್ ಎಂಬುವರ ಕೈ ಹಿಡಿಯಲಿದ್ದಾರೆ ನೇಹಾ. ಕುಟುಂಬಸ್ಥರು ಸೇರಿ ನೇಹಾ ಮತ್ತು ಪ್ರಣವ್ ಮದುವೆ‌ ನಿಶ್ಚಯಿಸಿದು, ಬರುವ ವರ್ಷ ಅಂದ್ರೆ 2019ರ ಫೆಬ್ರವರಿಯಲ್ಲಿ ನೇಹಾ – ಪ್ರಣವ್ ಹಸೆಮಣೆ ಏರಲಿದ್ದಾರೆ. ಮದುವೆಯ ನಂತರವೂ ನಟನೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ ನೇಹಾ ಪಾಟೀಲ್.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com