‘ಪೆಟ್ರೋ ಮ್ಯಾಕ್ಸ್’ ನಲ್ಲಿ ನೀರ್ ದೋಸೆ ಬೆಡಗಿ….

Published on

477 Views

‘ನೀರ್ ದೋಸೆ’ ನಿರ್ದೇಶಕ ವಿಜಯ್ ಪ್ರಸಾದ್ ತಮ್ಮ ಹೊಸ‌ ಚಿತ್ರ‌ದ ಶೂಟಿಂಗ್ ಅನ್ನು ಅರಮನೆ ನಗರಿಯಲ್ಲಿ ಇಂದು‌ ಪ್ರಾರಂಭಿಸಿದ್ದಾರೆ. ‘ ನೀರ್‌ದೋಸೆ’ ನಂತರ ಮತ್ತೊಮ್ಮೆ ಹರಿಪ್ರಿಯ, ವಿಜಯ್ ಪ್ರಸಾದ್‌ ನಿರ್ದೇಶನದ ‌ನಿನಾಸಂ ಸತೀಶ್‌ ನಾಯಕನಾಗಿ‌ ನಟಿಸುತ್ತಿರುವ ‘ಪೆಟ್ರೋ ಮ್ಯಾಕ್ಸ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈ ಹಿಂದೆಯೇ ಕಥೆ‌ ರೆಡಿ ಮಾಡಿಕೊಂಡಿದ್ದ‌ ವಿಜಯ್ ಪ್ರಸಾದ್ ಈಗ ಕೆಲವೊಂದು‌ ಬದಲಾವಣೆ ‌ಮಾಡಿಕೊಂಡು‌ ಚಿತ್ರೀಕರಣ ‌ಪ್ರಾರಂಭಿಸಿದ್ದಾರೆ. ಸದ್ಯಕ್ಕೆ ‘ತೋತಾಪುರಿ’ ಸಿನಿಮಾ ಮುಗಿಸಿರುವ‌ ವಿಜಯ್‌ ಪ್ರಸಾದ್. ಈ‌ ಚಿತ್ರ‌ ಬಿಡುಗಡೆಯ‌ ಮೊದಲೇ ‘ಪೆಟ್ರೋ ಮ್ಯಾಕ್ಸ್’ ಸಿನಿಮಾವನ್ನು‌ ಕೈಗೆತ್ತಿಕೊಂಡಿದ್ದಾರೆ. ಇದೇ‌ ಮೊದಲ‌ ಬಾರಿಗೆ ನಾಯಕ‌ ನೀನಾಸಂ ‌ಸತೀಶ್‌ ಗೆ ನಾಯಕಿಯಾಗಿ‌ ತೆರೆ ಹಂಚಿಕೊಂಡಿರುವ‌ ಹರಿಪ್ರಿಯಾ‌ ತಮ್ಮ ಇನ್ಸ್ಟಾಗ್ರಾಂ‌ ಅಕೌಂಟ್ ‌ನಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com