ನಾಳೆ ಕಾರ್ಮೋಡ ಸುರಿದು ಚಿತ್ರದ “ನೀ ಬಂದೆ ಬಾಳಿನಲ್ಲಿ” ಹಾಡು

Published on

270 Views

ಕುದುರೆಮುಖ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ
ಕಾರ್ಮೋಡ ಸರಿದು ಚಿತ್ರದ ಟ್ರೈಲರ್ ಬಿಡುಗಡೆಯಾಗಿ ನೋಡುಗರ
ಮೆಚ್ಚುಗೆ ಪಡೆಯುತ್ತಿದೆ‌. ನಾಗತ್ತಿಹಳ್ಳಿ ಚಂದ್ರಶೇಖರ್ ಅವರ ಗರಡಿಯಲ್ಲಿ
ಪಳಗಿರುವ ಉದಯ್ ಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ
ಮಾಡಿದ್ದಾರೆ. ಹಲವು ಸಿನಿಮಾಗಳಲ್ಲಿ ಸಹನಟಿಯಾಗಿ ನಟಿಸಿದ್ದ ಅದ್ವಿತಿ
ಶೆಟ್ಟಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಭಾರತ ಚಿತ್ರರಂಗದಲ್ಲಿ
ಇತಿಹಾಸ ಬರೆದು ಜನಮನ್ನಣೆ ಪಡೆದಿದ್ದ ಬಾಹುಬಲಿ ಚಿತ್ರದ ಹಾಡನ್ನು
ಹಾಡಿರುವ ಗಾಯಕಿ ರಮ್ಯಾ ಬೆಹರ್ ಅವರು “ನೀ ಬಂದೆ ಬಾಳಿನಲ್ಲಿ”
ಹಾಡನ್ನು ಹಾಡಿರುವುದು ವಿಶೇಷವಾಗಿದೆ. ಸತೀಶ್ ಬಾಬು ಅವರು
ಸಂಗೀತ ಸಂಯೋಜನೆ ಮಾಡಿರುವ ಈ ಗೀತೆಯನ್ನು ಕವಿರತ್ನ
ಡಾ.ವಿ.ನಾಗೇಂದ್ರ ಪ್ರಸಾದ್ ಅವರು ಬರೆದಿದ್ದಾರೆ. ಈ ಹಾಡು ನಾಳೆ ಸಂಜೆ 5ಕ್ಕೆ YouTubeನ ಆನಂದ್ ಆಡಿಯೋ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com