“ಸೇವಂತಿ”ಯಲ್ಲಿ ನವರಾತ್ರಿಉತ್ಸವ ಸೋಮವಾರದಿಂದ ಶನಿವಾರ ರಾತ್ರಿ 7.30ಕ್ಕೆ
ಒಂದಕ್ಕಿಂತಒಂದು ವಿಭಿನ್ನ ಧಾರಾವಾಹಿಯನ್ನು ಕನ್ನಡದ ವೀಕ್ಷಕರಿಗೆ ನೀಡಿದ ಉದಯ ಟಿವಿ ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪೂ ಮೂಡಿಸಿದೆ. ಅಂಥಹ ಹಲವು ಧಾರಾವಾಹಿಗಳ ಸಾಲಲ್ಲಿ ಸೇವಂತಿಯೂ ಒಂದು. ಹಬ್ಬದ ದಿನಗಳಲ್ಲಿ ವಿಶೇಷತೆಯೊಂದಿಗೆ ಬರುವ ಸೇವಂತಿ ಧಾರಾವಾಹಿ ಈ ನವರಾತ್ರಿಯ ಹಬ್ಬಕ್ಕೆ ನಾಲ್ಕು ದಿನಗಳ ವಿಶೇಷ ಸಂಚಿಕೆಯನ್ನ ಪ್ರೇಕ್ಷಕರಿಗೆ ಉಣಬಡಿಸಲು ತಯಾರಾಗಿದೆ.
ವಿನೂತನ ವಿಶೇಷ ಕಥೆಯುಳ್ಳ ಧಾರಾವಾಹಿ ಸೇವಂತಿ. ಅನಾಥೆಯಾಗಿ ಬೆಳೆದು ಗೊತ್ತಿಲ್ಲದೇ ತಾನು ಸೊಸೆಯಾಗಿರಬೇಕಾದ ಮನೆಗೆ ಒಂದು ವರ್ಷದ ಒಪ್ಪಂದದ ಹೆಂಡತಿಯಾಗಿ ಬರುವ ಹೆಣ್ಣಿನ ಕಥೆಯೇ ಸೇವಂತಿ. ತಪ್ಪು ಮಾಡದೇ ಇರೋ ತನ್ನ ಸಾಕು ತಂದೆಯನ್ನ ಜೈಲಿನಿಂದ ಬಿಡಿಸುವ ಸಲುವಾಗಿ ಲಾಯರ್ ಅರ್ಜುನನಿಗೆ ಹೆಂಡತಿಯಾಗಿ ನಟಿಸುತ್ತಿದ್ದಾಳೆ. ಪ್ರೀತಿ ಮದುವೆಯೆಂದರೆ ಆಗದ ಅರ್ಜುನ, ಸೇವಂತಿಯ ಗುಣಕ್ಕೆ ಮಾರುಹೋಗಿ ಅವಳನ್ನ ಪ್ರೀತಿಸ್ತಿದ್ದಾನೆ.
ನವರಾತ್ರಿ ಹಬ್ಬದಲ್ಲಿ ಗೊಂಬೆಗಳ ಅಲಂಕಾರ ಮಾಡುವ ಸೇವಂತಿ, ದೇವಿಯ ವೃತಾಚಾರಣೆ ಮಾಡುತ್ತಿರುತ್ತಾಳೆÉ. ಆಯುಧ ಪೂಜೆ, ಸರಸ್ವತಿ ಪೂಜೆ ಮಾಡಿ, ಹಬ್ಬದ ವಿಶೇಷ ಹಾಗೂ ಅದರ ಮಹತ್ವವನ್ನಇಲ್ಲಿ ಹೇಳಲಾಗುತ್ತದೆ. ಸೇವಂತಿ ಮನೆಗೆ ದೇವಿ ಸ್ವರೂಪಿಯಾಗಿರೋ ದುರ್ಗಾ ಅನ್ನೋ ಮಹಿಳೆ ಬರುತ್ತಾಳೆ. ಅರ್ಜುನ್ ಸೇವಂತಿ ಇಬ್ಬರೂ ಮದುವೆ ನಾಟಕವಾಡುತ್ತಿದ್ದಾರೆಂದು ಆಕೆ ಸತ್ಯ ನುಡಿಯುತ್ತಾಳೆ. ಹೀಗೆ ಇಬ್ಬರ ನಡುವಿನ ಒಪ್ಪಂದದ ಮದುವೆಗೆ ಈ ಹಬ್ಬತೆರೆ ಎಳೆದು, ಅರ್ಜುನ್ ಸೇವಂತಿ ಮುಂದೆ ನಿಜವಾದ ದಂಪತಿಗಳಾಗುತ್ತಾರೋ ಎಂಬ ತಿರುವು ಈ ಹಬ್ಬದ ವಿಶೇಷ ಸಂಚಿಕೆ.
ಪ್ರಸಿದ್ಧ ನಿರ್ಮಾಣ ಸಂಸ್ಥೆ ಸರೆಗಮ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಕೈಲಾಶ್ ಮಳವಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಹಿರಿಯ ನಟಿಆಶಾಲತಾ, ಶಿಶಿರ್ ಶಾಸ್ತ್ರಿ, ಪಲ್ಲವಿ ಗೌಡ, ಸಂಗೀತಾ, ಐಶ್ವರ್ಯ, ರೂಪಾ, ಗಿರೀಶ್ ಭಿನಯಿಸುತ್ತಿದ್ದಾರೆ.
ಸೇವಂತಿ ನವರಾತ್ರಿ ವಿಶೇಷ ಸಂಚಿಕೆ ಸೋಮವಾರದಿಂದ ಶನಿವಾರರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.