ಪ್ರೀತಿಯ ಹಿಂದೆ ಬಿದ್ದ ನವರಸನ್
ಪ್ರೀತಿಯ ಹಿಂದೆ ಬಿದ್ದ ನವರಸನ್
ರಾಕ್ಷಸಿ, ವೈರ, ಸೈಕೋ ಶಂಕ್ರದಂತಹ ವಿಭಿನ್ನ ಹಾಗು ದೆವ್ವದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟ, ನಿರ್ದೇಶಕ ನವರಸನ್, ‘ಜೈ ಲವ್ಸ್ ಜಾನು’ ಚಿತ್ರದ ಮೂಲಕ ಪ್ರೇಮ ಕಥೆಯ ಚಿತ್ರಗಳತ್ತ ಮುಖಮಾಡಿದ್ದಾರೆ.
ಗೀತಾ ಎಂಟಟೈನ್‍ಮೆಂಟ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ‘ಜೈ ಲವ್ಸ್ ಜಾನು’ ಚಿತ್ರದ ಮೂಲಕ ಪ್ರಾಣ್ ಪೂಜಾರಿ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗಿತ್ತಿದ್ದಾರೆ. ನವರಸನ್, ತಬಲನಾಣಿ, ವಿಜಯ್ ಚೆಂಡೂರ್, ಕೆಂಪೇಗೌಡ ಅವರ ತಾರಾಬಳಗ ಈ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರವನ್ನು ಸದ್ಯದಲ್ಲಿಯೇ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.
ತಮಿಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ನಟ ವಿಶಾಲ್ ಮತ್ತು ಅವರ ತಂದೆ ಜಿ.ಕೆ ರೆಡ್ಡಿ ಚೆನ್ನೈನಲ್ಲಿ ಇತ್ತೀಚೆಗೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ನವರಸನ್ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿ ಬೆನ್ನುತಟ್ಟಿ ಹರಸಿದ್ದಾರೆ.
ಜೈ ಲವ್ಸ್ ಜಾನು ಚಿತ್ರವನ್ನು ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿದೆಡೆ 45 ದಿನಗಳ ಕಾಲ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿದೆ. ಪ್ರೀತಿ ಮಾಡಿ ಕೈಗೂಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಆದರಾಚೆಯೂ ಜೀವನ ಇರಲಿದೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುತ್ತಾರೆ ನಟ ನವರಸನ್.
ವೈರ ಚಿತ್ರದ ಬಳಿಕ ಇಪ್ಪತ್ತೈದಕ್ಕೂ ಹೆಚ್ಚು ಕಥೆ ಕೇಳಿದ್ದೇನೆ.ಯಾವುದೂ ಇಷ್ಟವಾಗಲಿಲ್ಲ.ಪ್ರಾಣ್ ಹೇಳಿದ ಕಥೆ ಇಷ್ಟವಾಯಿತು. ಜೊತೆಗೆ ವೈರದಲ್ಲಿ ನಿರ್ಮಾಣದದಲ್ಲಿ ಕೈಜೋಡಿದ್ದ ಗೀತಾ ಎಂಟಟೈನ್‍ಮೆಂಟ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.ಮೊದಲಿನಿಂದಲೂ ವಿಭಿನ್ನವಾದ ಪಾತ್ರ ಮಾಡುವ ಹಂಬಲವಿತ್ತು.ಅದಕ್ಕೆ ಪೂರಕವಾಗ ಕಥೆಗಳು ಪಾತ್ರಗಳು ಸಿಕ್ಕಿರಲಿಲ್ಲ. ಈಗ ಒಳ್ಳೆಯ ಪಾತ್ರ ಸಿಕ್ಕಿದೆ.ದೆವ್ವದ ಸಿನಿಮಾ ಮಾಡಿ ಲವ್ ಸ್ಟೋರಿಯ ಸಿನಿಮಾಗೆ ಒಗ್ಗಿಕೊಳ್ಳುವುದು ಅಷ್ಟೇನು ಕಷ್ಟವಾಗುವುದಿಲ್ಲ. ನಟನೆ ನಿರ್ದೇಶನದಲ್ಲಿ ಅನುಭವವಿದೆ. ಮೂರು ವರ್ಷಗಳ ತರಬೇತಿಯನ್ನೂ ಪಡೆದಿದ್ದೇನೆ. ಅದು ಸಹಾಯವಾಗಲಿದೆ ಎನ್ನುವ ವಿಶ್ವಾಸ ಅವರದು.
ದೆವ್ವದ ಸಿನಿಮಾ ಮಾಡಿ ಅದಕ್ಕೆ ಹೊಂದಿಕೊಂಡಿದ್ದೆ. ಈಗ ಪ್ರೀತಿಯ ವಿಷಯದ ಕಥೆ ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ಹ್ಯೂಮರ್ ಮತ್ತು ಎಮೋಷನ್ ಇದೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದ ಎನ್ನುತ್ತಾರೆ ನವರಸನ್.