ಸರಿಪೋಧಾ ಶನಿವಾರಂ ಹೊಸ ವಿಡಿಯೋ ರಿಲೀಸ್: ವಿವೇಕ್ ಆತ್ರೇಯ ಅವರ ಚಿತ್ರದಲ್ಲಿ ನಾನಿ ಮತ್ತು ಎಸ್‌ಜೆ ಸೂರ್ಯ ಮುಖಾಮುಖಿ.
ವಿವೇಕ್ ಆತ್ರೇಯ ನಿರ್ದೇಶನದ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಆಕ್ಷನ್ ಚಿತ್ರ ‘ಸರಿಪೋದಾ ಶನಿವಾರಂ’ (ಶನಿವಾರ ಸಾಕಲ್ಲವೇ?) ಬಿಡುಗಡೆಗೆ ಸಿದ್ಧವಾಗಿದೆ.
ತೆಲುಗು ಆಕ್ಷನ್ ಎಂಟರ್‌ಟೈನರ್ ಸರಿಪೋಧಾ ಶನಿವಾರಂ ವಿವೇಕ್ ಆತ್ರೇಯ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಅವರು ನಾಯಕನಾಗಿ ಮತ್ತು ನಟಿ ಪ್ರಿಯಾಂಕಾ ಮೋಹನ್ ನಾಯಕಿಯಾಗಿ ಅಭಿನಯಿಸಿದ್ದಾರೆ.ಚಿತ್ರದಲ್ಲಿ ಎಸ್‌ಜೆ ಸೂರ್ಯ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಸರಿಪೋಧಾ ಶನಿವಾರಂ, ನಿರ್ದೇಶಕ ವಿವೇಕ್ ಆತ್ರೇಯ ಅವರ ಮೊದಲ ಆಕ್ಷನ್ ಎಂಟರ್‌ಟೈನರ್ ಚಿತ್ರ ವಾಗಿದ್ದು, ಅವರು ಕೌಟುಂಬಿಕ ನಾಟಕಗಳು ಮತ್ತು ಹಾಸ್ಯ ಚಿತ್ರಗಳಾದ ಮೆಂಟಲ್ ಮದಿಲೋ, ಅಂತೆ ಸುಂದರಾನಿಕಿ ಮತ್ತು ಬ್ರೋಚೆವರೇವರೂರ ಅಂತಹ ಚಿತ್ರಗಳಲ್ಲಿ ಹೆಸರುವಾಸಿಯಾಗಿದ್ದಾರೆ.
‘ಸರಿಪೋದಾ ಶನಿವಾರಂ’ ಚಿತ್ರವು ನಾನಿಯವರೊಂದಿಗೆ ನಿರ್ದೇಶಕ ವಿವೇಕ್ ಆತ್ರೇಯ ಅವರ ಎರಡನೇ ಪ್ರಾಜೆಕ್ಟ್ ಆಗಿದ್ದು, ಮೊದಲನೆ ಚಿತ್ರ ‘ಅಂತೆ ಸುಂದರಾನಿಕಿ’ ತೆಲುಗು ಭಾಷೆಯ ರೊಮ್ಯಾಂಟಿಕ್ ಕಾಮಿಡಿ/drama ಆಗಿದ್ದು, 2022ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ನಾನಿ ಮತ್ತು ನಜ್ರಿಯಾ ನಜೀಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿದ್ದು, ನಾನಿ ಮತ್ತು ನಜ್ರಿಯ ಅವರ ಅಭಿನಯಕ್ಕೆ ವಿಶೇಷ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನಟ ಎಸ್ ಜೆ ಸೂರ್ಯ ಅವರ ಜನ್ಮದಿನದಂದು ನಿರ್ದೇಶಕ ವಿವೇಕ್ ಆತ್ರೇಯ ಅವರ ತೆಲುಗು ಚಿತ್ರ ‘ಸರಿಪೋಧಾ ಸನಿವಾರಂ’ ನಿಂದ ‘ಟೀಸರ್ ಅಲ್ಲ’ ಅನ್ನುವ ಶೀರ್ಷಿಕೆಯಲ್ಲಿ ವೀಡಿಯೋ ಬಿಡುಗಡೆ ಮಾಡಿದ್ದಾರೆ.
ಭಗವಾನ್ ಶ್ರೀ ಕೃಷ್ಣ ಮತ್ತು ಸತ್ಯಭಾಮೆ, ರಾಕ್ಷಸ ನರಕಾಸುರನನ್ನು ಸೋಲಿಸುವ ಪೌರಾಣಿಕ ಕಥೆಯಿಂದ ಪ್ರೇರಿತವಾದ ಚಿತ್ರದ ಕಥಾಹಂದರವನ್ನು ಸೂಚಿಸುವ ನಿರೂಪಣೆಯೊಂದಿಗೆ, ನಾನಿ ಮತ್ತು ಪ್ರಿಯಾಂಕಾ ಮೋಹನ್ ರವರು ಕೃಷ್ಣ ಮತ್ತು ಸತ್ಯಭಾಮೆಯನ್ನು ಪ್ರತಿನಿಧಿಸುತ್ತಾರೆ.
ಚಿತ್ರದಲ್ಲಿ ಎಸ್ ಜೆ ಸೂರ್ಯ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿದ್ದಾರೆ. ನಾನಿ ಅವರ “ಹ್ಯಾಪಿ ಬರ್ತಡೇ ಸರ್ ” ಎನ್ನುವ ಡೈಲಾಗ್ ಎಸ್ ಜೆ ಸೂರ್ಯ ಅವರ ಬರ್ತಡೇ ಗೆ ಸ್ಪೆಷಲ್ ವಿಷ್ ಅನ್ನೋ ಹಾಗೆ ‘ಟೀಸರ್ ಅಲ್ಲ’ ಅಂತ ಶೀರ್ಷಿಕೆಯನ್ನು ಕೊಡಲಾಗಿದೆ.
ಈ ವಿಡಿಯೋದಲ್ಲಿ ಸೂರ್ಯಾ ಅವರ ನಿರ್ದಯಿ ಪೊಲೀಸ್ ಅಧಿಕಾರಿ ಪಾತ್ರವನ್ನು ನರಕಾಸುರನಿಗೆ ಮತ್ತು ನಾಯಕನ ಪಾತ್ರಗಳನ್ನು ಕೃಷ್ಣ ಮತ್ತು ಸತ್ಯಭಾಮಕ್ಕೆ ಹೋಲಿಕೆಮಾಡಲಾಗಿದೆ. ದುಷ್ಟ ಶಕ್ತಿಯು ಬಲಗೊಂಡಾಗಲೆಲ್ಲಾ ಅದನ್ನು ಎದುರಿಸಲು ಸಮಾನವಾದ ಅಥವಾ ಹೆಚ್ಚು ಶಕ್ತಿಶಾಲಿ ಶಕ್ತಿಯು ಉದ್ಭವಿಸುತ್ತದೆ ಎಂದು ಹೇಳುವ ಅಶರೀರವಾಣಿಯೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ.
ಎಸ್.ಜೆ.ಸೂರ್ಯ ಅವರು ಧನುಷ್ ಅಭಿನಯದ ರಾಯನ್’ ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ ಮತ್ತು ‘ರಾಯನ್’ ಚಿತ್ರದ ಪ್ರಚಾರದ ಸಮಯದಲ್ಲಿ, ಸೂರ್ಯ ಅವರು ‘ಸರಿಪೋಧಾ ಶನಿವಾರಂ’ ಬಗ್ಗೆ ಹಂಚಿಕೊಂಡಿದ್ದರು.ಕಾಲಿವುಡ್‌ನಲ್ಲಿ ‘ಮಾನಾಡು’ ಹೇಗೆ ಮನಸ್ಸಿಗೆ ಮುದ ನೀಡುವ ವೈಜ್ಞಾನಿಕ ಕಥಾಹಂದರವನ್ನು ಹೊಂದಿದೆಯೋ ಅದೇ ರೀತಿ ತೆಲುಗು ಚಿತ್ರರಂಗದಲ್ಲಿ ಸರಿಪೋಧಾ ಸನಿವಾರಂ’ ಚಿತ್ರವು ದೊಡ್ಡ ಯಶಸ್ಸನ್ನು ಗಳಿಸುತ್ತದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅಂದಹಾಗೆ ಸರಿಪೋಧಾ ಸನಿವಾರಂ ಸಿನಿಮಾ ದೊಡ್ಡ ಹಿಟ್ ಆಗಲಿದೆ ಎಂದು ಎಸ್.ಜೆ.ಸೂರ್ಯ ಹೇಳಿದ್ದಾರೆ.
ರಾಯನ್ ಚಿತ್ರದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
‘ಸರಿಪೋಧಾ ಶನಿವಾರಂ’ ನಲ್ಲಿ ನಾನಿ ಪಾತ್ರವು ವಾರದ ಒಂದು ನಿರ್ದಿಷ್ಟ ದಿನದಂದು ಮಾತ್ರ ಕೋಪಗೊಳ್ಳುವ ವ್ಯಕ್ತಿಯಂತೆ ಕಾಣುತ್ತದೆ. ಈ ಚಿತ್ರಕ್ಕೆ ಜೇಕ್ಸ್ ಬಿಜಾಯ್ ಅವರ ಸಂಗೀತ ಮತ್ತು ಮುರಳಿ ಜಿ ಅವರ ಛಾಯಾಗ್ರಹಣವಿದೆ.
ಡಿವಿವಿ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರವು ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಆಗಸ್ಟ್ 29 ರಂದು ಬಿಡುಗಡೆಯಾಗಲಿದೆ.