“ನಾತಿಚರಾಮಿ” ಮೂಹೂರ್ತ
ರಾಷ್ಟ ಪ್ರಶಸ್ತಿ ಪಡೆದಿದ್ದ ಹರಿವು ಸಿನಿಮಾವನ್ನು ನಿರ್ದೇಶನ ಮಾಡಿದ್ದ ಮಂಸೂರೆ ಈಗ ಮಹಿಳಾ ಪ್ರದಾನ ‘ನಾತಿಚರಾಮಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹೆಣ್ಣು ತನ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಹೇಗೆ ನಿರ್ವಹಿಸುತ್ತಳೆ ಎಂಬ ಕಥೆಯಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ತಾನದಲ್ಲಿ ಮುಹೂರ್ತ ಆಚರಿಸಿಕೊಂಡ ಚಿತ್ರತಂಡ ಸಿನಿಮಾದ ಬಗ್ಗೆ ಮಾತನಾಡಿದರು.
ಈ ಚಿತ್ರದಲ್ಲಿ ಟೆಕ್ಕಿ ಯೊಬ್ಬಳು ವೃತ್ತಿಯಲ್ಲಿ ಯಶಸ್ಸು ಕಂಡು ತನ್ನ ವೈಯಕ್ತಿಕ ಜೀವನದ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುತ್ತಿರುತ್ತಾಳೆ. ಸಂಪ್ರದಾಯ ಆಚರಣೆ ಗೊತ್ತಿದ್ದು, ಗೊತ್ತಿಲ್ಲದ ಹಾಗೆ ಅದನ್ನು ಹೇಗೆ ನಿಭಾಯಿಸುವುದು ಎಂದು ಗೊಂದಲದಲ್ಲಿರುತ್ತಾಳೆ.ಇದೇ ಸಮಯದಲ್ಲಿ ತನ್ನ ಪತಿ ಮೃತಪಟ್ಟಿರುತ್ತಾನೆ. ವೃತ್ತಿ ಜೀವನ ಮೇಲೆ ಹೋದಂತೆ ವೈಯಕ್ತಿಕ ಜೀವನ ಕುಸಿಯುತ್ತಿರುತ್ತದೆ.ನೋಡುಗರು ಈ ಕಥೆಯನ್ನು ರಿಲೇಟ್ ಸಹ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ನಿರ್ದೇಶಕ ಮಂಸೂರೆ.
ಈ ಚಿತ್ರದ ಚಿತ್ರಿಕರಣ ಸಂಪೂರ್ಣ ಬೆಂಗಳೂರಿನಲ್ಲೇ ನಡೆಯುತ್ತದೆ. ಶೃತಿ ಹರಿಹರನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಶರಣ್ಯ, ಅಶ್ವಿನ ಗ್ರೀಷ್ಮಾ ಬಾಲಾಜಿ ಮನೋಹರ್ , ಸಂಚಾರಿ ವಿಜಯ್ ನಟಿಸುತ್ತಿದ್ದಾರೆ.ಲೇಖಕಿ ಸಂಧ್ಯಾರಾಣಿ ಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ.