ಶುರುವಾಯ್ತು ನಟಸಾರ್ವಭೌಮನ ಫೀವರ್ …

Published on

326 Views

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ..ಆದ್ರೆ ಅಭಿಮಾನಿಗಳ ಒತ್ತಾಯಕ್ಕಾಗಿ ಇಂದು ರಾತ್ರಿಯಿಂದಲೇ ಪ್ರದರ್ಶನ ಆರಂಭವಾಗ್ತಿದೆ…ಮಾಗಡಿ ರಸ್ತೆಯ ಪ್ರಸನ್ನ ಸಿನಿಮಾ ಮಂದಿರದಲ್ಲಿ ಇಂದು ರಾತ್ರಿ 10 ಗಂಟೆಗೆ ಸೋ ಶುರುವಾಗಲಿದ್ದು, ಊರ್ವಶಿ ಚಿತ್ರಮಂದಿರದಲ್ಲಿ ಹಾಗೂ ಗೌಡನ ಪಾಳ್ಯದ ಶ್ರೀನಿವಾಸ ಥಿಯೇಟರ್ ನಲ್ಲಿ ಮುಂಜಾನೆ 4 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭವಾಗ್ತಿದೆ…ಹತ್ತು ವರ್ಷಗಳ ನಂತ್ರ ರಾಕ್ ಲೈನ್ ಹಾಗೂ ಪುನೀತ್ ಒಂದಾಗಿದ್ದು ಪವನ್ ಒಡೆಯರ್ ಹಾಗೂ ಅಪ್ಪು ಕಾಂಬಿನೇಷನ್ ನಲ್ಲಿ ಮೂಡಿ ಬರ್ತಿರೋ ಎರಡನೇ ಚಿತ್ರವಿದು…
ಸದ್ಯ ರಿಲೀಸ್ ಆಗಿರೋ ಟ್ರೇಲರ್ ನಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಮೂಡಿದ್ದು ಹಾಡುಗಳು ಸೂಪರ್ ಹಿಟ್ ಆಗಿದೆ…ಒಟ್ಟಾರೆ ಸಾಕಷ್ಟು ದಿನಳಿಂದ ಕಾದಿದ್ದ ಅಭಿಮಾನಿಗಳಿಗೆ ಇಂದು ನಟ ಸಾರ್ವಭೌಮನ ದರ್ಶನ ಆಗಲಿದೆ…

Copyright ©2026 . All Rights Reserved. privacy | terms Whatsapp: 9538193653 Email: hello@flixoye.com