ಇಂದಿನಿಂದ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ ನಾನು ಮತ್ತು ಗುಂಡ

Published on

376 Views

ಕಾಮಿಡಿ ಕಿಲಾಡಿಗಳು ಮೂಲಕ ಕನ್ನಡಿಗರ ಮನಗೆದ್ದ ಶಿವರಾಜ್
ಕೆ.ಆರ್.ಪೇಟೆ ಶಿವರಾಜ್ ಮೊದಲಬಾರಿಗೆ ನಾಯಕನಾಗಿ ನಟಿಸಿರುವ
ನಾನು ಮತ್ತು ಗುಂಡ ಚಿತ್ರವು ಇಂದಿನಿಂದ ಬಿಡುಗಡೆಯಾಗಲಿದೆ.
ಶ್ರೀನಿವಾಸ್ ತಿಮ್ಮಯ್ಯ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಶಿವರಾಜ್ ಅವರಿಗೆ ಜೋಡಿಯಾಗಿ ಸಂಯುಕ್ತಾ ಹೊರನಾಡು ಅವರು
ನಟಿಸಿದ್ದಾರೆ. ಪೊಯಮ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಘು ಹಾಸನ್
ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್ ಶರ್ಮಾ ಅವರ
ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಈ ಚಿತ್ರದ ಮತ್ತೊಂದು
ವಿಶೇಷವೆಂದರೆ ನಾಯಿಯೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು
ಕಥೆಯು ನಾಯಿ ಸುತ್ತ ಸುತ್ತಲಿದೆಯಂತೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com