ವೇದಿಕೆಯ ಮೇಲಿಂದ ಜೋರಾಗಿ ತಳ್ಳಿದ್ದ ಬಾಲಯ್ಯನ ಬಗ್ಗೆ ನಟಿ ಅಂಜಲಿ ಹೇಳಿದ್ದೇನು??
ತೆಲುಗಿನ ಮೇರು ನಟ ನಂದಮೂರಿ ಬಾಲಕೃಷ್ಣ ಅವರು “ ಗ್ಯಾಂಗ್ಸ್ ಆಫ್ ಗೋದಾವರಿ” ಪ್ರೀ-ರಲೀಸ್ ಈವೆಂಟ್’ನಲ್ಲಿ ವೇದಿಕೆ ಮೇಲಿದ್ದ ನಟಿ ಅಂಜಲಿಯವರನ್ನು ತಳ್ಳಿದ ಘಟನೆ ಎಲ್ಲರಿಗೂ ತಿಳಿದಿದೆ ಹಾಗೂ ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾಲಯ್ಯರವರ ಮೇಲೆ ಬಹಳ ಆಕ್ರೋಶವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರು.
“ ಗ್ಯಾಂಗ್ಸ್ ಆಫ್ ಗೋದಾವರಿ” ಸಿನಿಮಾದ ಪ್ರೀ-ರಿಲೀಸ್ ಈವೆಂಟ್’ನಲ್ಲಿ ಬಾಲಯ್ಯ ನಟಿ ಅಂಜಲಿಯವರನ್ನು ತಳ್ಳಿದ್ದು ತಮಾಷೆಗಾಗಿದ್ದರೂ, ನೋಡುಗರು ಈ ಘಟನೆಯ ಬಗ್ಗೆ ಬಹಳ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಇದಲ್ಲದೇ, ಬಾಲಯ್ಯನ ಮೇಲೆ ಇನ್ನೂ ಹಲವಾರು ಟೀಕೆಗಳು ವ್ಯಕ್ತವಾಗಿದೆ. ಅದೇನೆಂದರೆ, ಈವೆಂಟ್ ಗೆ ಬಾಲಯ್ಯ ಮದ್ಯ ಸೇವಿಸಿ ಬಂದು ವೇದಿಕೆಯ ಮೇಲೆ ಈ ರೀತಿ ಮಾಡಿದ್ದಾರೆ ಎಂಬ ಟೀಕೆಗಳು ಕೂಡ ಕೇಳಿಬಂದಿತ್ತು. ಆದರೆ, ಬಾಲಯ್ಯ ಮದ್ಯ ಸೇವಿಸಿರಲಿಲ್ಲ ಹಾಗೂ ಬಾಲಯ್ಯ ಎಂದಿನಂತೆ ಇದನ್ನು ತಮಾಷೆಗಾಗಿ ಮಾಡಿದ್ದು ಎಂದು ಬಾಲಯ್ಯರವರ ಆಪ್ತರು ಹೇಳಿದ್ದಾರೆ.
ಇನ್ನೂ, ಈ ವಿಷಯದ ಬಗೆ ನಟಿ ಅಂಜಲಿ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಯ್ಯನವರ ಉಪಸ್ಥಿತಿಯಿಂದ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಪ್ರೀ-ರಿಲೀಸ್ ಈವೆಂಟ್ ರಂಗೇರಿದೆ ಎಂದು ಹೇಳಿ ನಂದಮೂರಿ ಬಾಲಕೃಷ್ಣರವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ನಂದಮೂರಿ ಬಾಲಕೃಷ್ಣ ಅವರು ಮತ್ತು ನಾನು ಎಂದಿಗೂ ಪರಸ್ಪರ ಗೌರವವನ್ನು ಉಳಿಸಿಕೊಂಡಿದ್ದೇವೆ. ಹಿಂದಿನಿಂದಲೂ ಕೂಡ ನಮ್ಮಿಬ್ಬರ ಮಧ್ಯೆ ಉತ್ತಮ ಸ್ನೇಹವಿದೆ ಹಾಗೂ ಗೌರವವಿದೆ ಎಂದು ಹೇಳಲು ಬಯಸುತ್ತೇನೆ. ಬಾಲಯ್ಯ ಜೊತೆ ಮತ್ತೆ ವೇದಿಕೆ ಹಂಚಿಕೊಂಡಿದ್ದು ಅದ್ಭುತ ಎನ್ನಿಸುತ್ತದೆ ಎಂದು ನಟಿ ಅಂಜಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿದವರು ವೇದಿಕೆಯ ಮೇಲೆ ನಡೆದ ಘಟನೆಯ ಬಗ್ಗೆ ನಟಿ ಅಂಜಲಿಯವರಿಗೆ ಯಾವದೇ ಬೇಸರವಿಲ್ಲ ಎಂದು ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.