‘ನಾಗರಹಾವು’ ಟೀಸರ್ ಬಿಡುಗಡೆ..!

Published on

469 Views

ಡಾ.ವಿಷ್ಣುವರ್ಧನ್ ನಾಯಕರಾಗಿ ‌ಅಭಿನಯಿಸಿದ‌ ‘ನಾಗರಹಾವು’ ಸಿನಿಮಾ ಹೊಸ ಅವತರಣಿಕೆ ಯಲ್ಲಿ ಪ್ರೇಕ್ಷಕರ ಮುಂದೆ ಬರಲು‌ ಸಜ್ಜಾಗಿದೆ. ಹೊಸ ತಂತ್ರಜ್ಞಾನದಲ್ಲಿ ಹಳೆ ಸಿನಿಮಾವನ್ನು ಬೆಳ್ಳಿ ಪರದೆಯ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ‌ ಬಂದಿದೆ. ಹೊಸ ತಂತ್ರಜ್ಞಾನದಲ್ಲಿ ಸಿದ್ಧವಾಗಿರುವ ‘ ನಾಗರ ಹಾವು’ ಚಿತ್ರದ ಟೀಸರ್ ಅನ್ನು ಟ್ವಿಟ್ಟರ್ ಮೂಲಕ‌ ಕಿಚ್ಚ‌ ಸುದೀಪ್ ಬಿಡುಗಡೆ ಮಾಡಿದ್ದಾರೆ. ಟೀಸರ್ ಬಿಡುಗಡೆ ಮಾಡಿದ ಸುದೀಪ್ ‘ ವಿಷ್ಣುವರ್ಧನ್ ರವರು‌ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ನನಗೆ‌ ವಿಷ್ಣುವರ್ಧನ್ ಅವರೇ ಸ್ಪೂರ್ತಿ.

ಅವರ ಅಭಿನಯದ ‘ನಾಗರಹಾವು’ ಚಿತ್ರದ ಟೀಸರ್ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದ್ದು ಸಂತೋಷ ಕೊಟ್ಟಿದೆ’ ಎಂದರು‌ ಕಿಚ್ಚ. ಹೊಸ ತಂತ್ರಜ್ಞಾನದೊಂದಿಗೆ 7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಪೆಕ್ಟ್ ಮೂಲಕ ‘ ನಾಗರ ಹಾವು’ ಅಭಿಮಾನಿಗಳ ಮುಂದೆ ಬರಲಿದೆ. ವಿಷ್ಣುವರ್ಧನ್ ಅಭಿನಯದ ‘ ನಾಗರಹಾವು’ ಚಿತ್ರವನ್ನು ನಿರ್ಮಾಪಕ ವೀರಸ್ವಾಮಿ‌ ನಿರ್ಮಾಣ ಮಾಡಿದ್ದರು. ಈಗ ಅದನ್ನು ಹೊಸ ತಂತ್ರಜ್ಞಾನದಲ್ಲಿ ರೀ ರಿಲೀಸ್ ಮಾಡಲು‌ ವೀರಸ್ವಾಮಿ‌ ಮಗ ರವಿಚಂದ್ರನ್ ಸಹೋದರ ಬಾಲಾಜಿ ಮುಂದಾಗಿದ್ದಾರೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com