‘ನಾಗಕನ್ನಿಕೆ’ ಈಗ ಮುಸ್ಲಿಂ ಹುಡುಗಿ…!!!

Published on

635 Views


‘ನಾಗಕನ್ನಿಕೆ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡು, ‘ಧೈರ್ಯಂ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟು, ನಂತರ ‘ಬಜಾರ್’ ‘ಆಪರೇಶನ್ ನಕ್ಷತ್ರ’ ಚಿತ್ರಗಳಲ್ಲಿ ನಟಿಸಿದ್ದರು. ‘ಬಜಾರ್’ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿರುವ ‘ನಾಗಕನ್ನಿಕೆ’ ಯ ಅದಿತಿ ಪ್ರಭುದೇವರವರಿಗೆ ಜಗ್ಗೇಶ್ ಅಭಿನಯದ ‘ತೋತಾಪುರಿ’ ಸಿನಿಮಾದಲ್ಲಿ ನಾಯಕಿಯಾಗಿ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

‘ಸಿದ್ಲಿಂಗು’ , ‘ನೀರು ದೋಸೆ’ ಚಿತ್ರಗಳನ್ನು ಮಾಡಿದ್ದ ನಿರ್ದೇಶಕ ವಿಜಯಪ್ರಸಾದ್ ‘ತೋತಾಪುರಿ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರೀಕರಣ ಇದೀಗ ಬನ್ನೂರಿನಲ್ಲಿ ನಡೆಯುತ್ತಿದ್ದು, ಅದಿತಿ ಪ್ರಭುದೇವ ಚಿತ್ರದಲ್ಲಿ ಶಕೀಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಸಮಾಜದಲ್ಲಿರುವ ಜಾತಿ ರಾಜಕಾರಣದ ಬಗ್ಗೆ ವಿಡಂಬನಾತ್ಮಕವಾಗಿ ಚಿತ್ರಿಸಲಾಗಿದೆ. ಜಾತಿ ಹಾಗೂ ಮೈ ಬಣ್ಣ ಹೇಗೆ ಸಮಾಜದಲ್ಲಿ ಪಾತ್ರವಹಿಸುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗುತ್ತದೆ ಎನ್ನುತ್ತಾರೆ ನಿರ್ದೇಶಕರು. ಜಗ್ಗೇಶ್ ರವರು ಪಾತ್ರ ಮತ್ತು ಹೊಸ ಲುಕ್ ನಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ ನಿರ್ದೇಶಕ ವಿಜಯ ಪ್ರಸಾದ್.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com