Naga Chaithanya – Shobhitha Dhulipala: ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಮಂತಾ ಮಾಜಿ ಪತಿ ನಾಗಚೈತನ್ಯ
ನಟಿ ಸಮಂತಾ ಜೊತೆಗೆ ಡಿವೋರ್ಸ್ ಆದ ನಂತರ ಪರ್ಸನಲ್ ಲೈಫ್ ಬಗ್ಗೆ ಯಾವುದೇ ಸುದ್ದಿ ಬಿಟ್ಟುಕೊಡದ ಅಕ್ಕಿನೇನಿ ನಾಗಚೈತನ್ಯ, ಇಡಿಗ ತನ್ನ ದೀರ್ಘಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ (Naga Chaithanya – Shobhitha Dhulipala) ಮಾಡಿಕೊಂಡಿದ್ದಾರೆ!
ಅಕ್ಕಿನೇನಿ ನಾಗಾರ್ಜುನ್ ಅವರ ಹಿರಿಯ ಪುತ್ರ ನಾಗಚೈತನ್ಯ, ಕಳೆದ ಕೆಲವು ವರ್ಷಗಳಿಂದ ತನ್ನ ಜೊತೆ ಡೇಟಿಂಗ್ ನಲ್ಲಿದ್ದ ನಟಿ ಶೋಭಿತಾ ಧೂಳಿಪಾಲ ಜೊತೆಗೆ ಕುಟುಂಬದವರ ಸಮ್ಮುಖದಲ್ಲಿ ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಎಂಗೇಜ್’ಮೆಂಟ್ ಮಾಡಿಕೊಂಡಿದ್ದಾರೆ.
ಸಮಂತಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದ ಅಕ್ಕಿನೇನಿ ನಾಗಚೈತನ್ಯ, ಕೆಲವು ಆಂತರಿಕ ಸಂಘರ್ಷದ ಬಳಿಕ ಡಿವೋರ್ಸ್ ಪಡೆದುಕೊಂಡಿದ್ದರು. ಇದೀಗ ತಮ್ಮ ದೀರ್ಘಕಾಲದ ಗೆಳತಿ ಶೋಭಿತಾ ಜೊತೆಗೆ ಹಸೆಮಣೆ ಏರಲು ಸಿದ್ಧವಾಗಿದ್ದಾರೆ.
Naga Chaithanya – Shobhitha Dhulipala: ಕುಟುಂಬದ ಸಮ್ಮುಖದಲ್ಲೇ ಜೋಡಿ ಎಂಗೇಜ್’ಮೆಂಟ್
ನಾಗಚೈತನ್ಯ ತಂದೆ ನಾಗಾರ್ಜುನ ಹಾಗೂ ತಾಯಿ ಅಮಲಾ ಅಕ್ಕಿನೇನಿ ಜೊತೆಗೆ, ತಮ್ಮ ಅಖಿಲ್ ಅಕ್ಕಿನೇನಿ ಸಮ್ಮುಖದಲ್ಲಿ, ಶೋಭಿತಾ ಅವರ ಕುಟುಂಬದವರ ಉಪಸ್ಥಿತಿಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ.
ತಿಳಿ ಗುಲಾಬಿ ಬಣ್ಣದ ಸೀರೆ ಹಾಗೂ ಸಾಂಪ್ರದಾಯಿಕ ಆಭರಣ ತೊಟ್ಟು ಮದುಮಗಳು ಶೋಭಿತಾ ಧೂಳಿಪಾಲ ಮಿಂಚಿದರೆ, ಕ್ರೀಮ್ ಬಿಳಿ ಬಣ್ಣದ ಧೋತಿ ಪಂಚೆ ಉಟ್ಟು ನಾಗಚೈತನ್ಯ ಕಂಗೊಳಿಸುತ್ತಿದ್ದರು.
“We are delighted to announce the engagement of our son, Naga Chaitanya, to Sobhita Dhulipala, which took place this morning at 9:42 a.m.!!
We are overjoyed to welcome her into our family.
Congratulations to the happy couple!
Wishing them a lifetime of love and happiness. 💐… pic.twitter.com/buiBGa52lD— Nagarjuna Akkineni (@iamnagarjuna) August 8, 2024
ಮಗನ ನಿಶ್ಚಿತಾರ್ಥದ ಬಗ್ಗೆ ಸಂತಸ ಹಂಚಿಕೊಂಡ ನಾಗಚೈತನ್ಯ ತಂದೆ ಅಕ್ಕಿನೇನಿ ನಾಗಾರ್ಜುನ, ಇಂದು ಬೆಳಗ್ಗೆ 9.42 ಕ್ಕೆ ನನ್ನ ಮಗನ ನಿಶ್ಚಿತಾರ್ಥ ನೆರವೇರಿದೆ. ನಿಶ್ಚಿತಾರ್ಥದ ಬಗ್ಗೆ ಘೋಷಿಸಲು ಸಂತೋಷವಾಗುತ್ತಿದೆ ಹಾಗೂ ಕುಟುಂಬಕ್ಕೆ ಶೋಭಿತಾ ಅವರನ್ನು ಸಂತೋಷದಿಂದ ಸ್ವಾಗತಿಸುತ್ತಿದ್ದೇವೆ. ದಂಪತಿಗಳಿಗೆ ಅಭಿನಂದನೆಗಳು. ಅವರಿಬ್ಬರೂ ಜೀವನಪೂರ್ತಿ ಸಂತೋಷವಾಗಿರಲಿ ಎಂದು ಹಾರೈಸುತ್ತೇನೆ. ದೇವರು ಒಳ್ಳೇದು ಮಾಡಲಿ ಎಂದು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಹಾರೈಸಿದ್ದಾರೆ.
First pictures are out!#SobhitaDhulipala and #NagaChaitanya look so in love as they get engaged in Hyderabad.#Celebs #Trending #News pic.twitter.com/TAxw4ol7mP
— Filmfare (@filmfare) August 8, 2024
ಹೊಸತಾಗಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಗೆ ಆತ್ಮೀಯರು, ಸಿನಿರಂಗದ ಸ್ನೇಹಿತರು, ಗಣ್ಯ ವ್ಯಕ್ತಿಗಳು ಹಾಗೂ ಅಸಂಖ್ಯಾತ ಅಭಿಮಾನಿಗಳು ಶುಭಹಾರೈಸುತ್ತಿದ್ದು, ನೂರ್ಕಾರ ಸುಖವಾಗಿ ಬಾಳಿ ಎಂದು ಆಶೀರ್ವದಿಸುತ್ತಿದ್ದಾರೆ.
Naga Chaithanya – Shobhitha Dhulipala: ಯಾರೀಕೆ ಶೋಭಿತಾ ಧೂಳಿಪಾಲ?
ನಾಗಚೈತನ್ಯ ಜೊತೆ ಶೋಭಿತಾ ಧೂಳಿಪಾಲ ಕೂಡ ಬಹುಭಾಷಾ ನಟಿಯಾಗಿದ್ದು, ತೆಲುಗು, ಹಿಂದಿ, ತಮಿಳು, ಮಳಯಾಳಂ ಹಾಗೂ ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಈಕೆ 2013 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಅರ್ಥ್ 2013 ಗೆದ್ದಿದ್ದು, ಮಿಸ್ ಅರ್ಥ್ 2013 ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.