ಹೊಸ ಬದಲಾವಣೆಯಲ್ಲಿ “ನಾನು ನನ್ನ ಕನಸು” ಅಕ್ಟೋಬರ್ 9ರಿಂದ ಸೋಮವಾರದಿಂದ ಶನಿವಾರ ರಾತ್ರಿ 8ಕ್ಕೆ

Published on

459 Views

ಉದಯಟಿವಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ “ನಾನು ನನ್ನ ಕನಸು”, ಬದಲಾದ ರೂಪದಲ್ಲಿ ಕಾಣಿಸಲು ಸಜ್ಜಾಗುತ್ತಿದೆ. ಕಥೆಯಲ್ಲಿ ಇರುವ ಮಕ್ಕಳು ದೊಡ್ಡವರಾಗುತ್ತಿದ್ದಾರೆ, ಆದರೆ ಅವರು ಕಂಡ ಕನಸು ಬದಲಾಗಿಲ್ಲ. ಇದೇ ಬುಧವಾರದಿಂದ ಸೊಮವಾರದಿಂದ ಶನಿವಾರದವರೆಗೆ ರಾತ್ರಿ 8ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.

ಕಥೆಯ ನಾಯಕಿ ಅನು ಈಗ ದೊಡ್ಡವಳಾಗಿ ತನ್ನ ಅಮ್ಮನ ಮನೆಯನ್ನು ಬಿಟ್ಟು ಕಣ್ಣಲಿ ಡಾಕ್ಟರ್ ಆಗುವ ಕನಸು ಹೊತ್ತು ಬೆಂಗಳೂರಿಗೆ ಬರುತ್ತಾಳೆ. ಆದರೆ ಅವಳು ಕನಸು ದೊಡ್ಡ ನಗರದಲ್ಲಿ ನೊಚ್ಚು ನೂರಾಗುತ್ತದೆ. ಇದಕ್ಕೆ ಕಾರಣ ತಾನು ಕಳೆದುಕೊಡ ತನ್ನ ಸ್ನೇಹಿತ ಕಾರ್ತಿಕ್ ಮತ್ತು ಕೆಂಡಕಾರುವ ದುಷ್ಮನ್ ರಾಕಿ. ರಾಕಿ ಮತ್ತು ಕಾರ್ತಿಕ್ ಅವರ ಕದನ ಅನು ಬಾಳಿನಲ್ಲಿ ಕಾಳ್ಗಿಚ್ಚು ತರುತ್ತದೆ. ಈ ಕಾಳ್ಗಿಚ್ಚಿಗೆ ತನ್ನ ಕನಸು ಸಿಲುಕಿ ಸಾವನ ಅಪ್ಪುತ್ತದಾ ಅಥವಾ ಅನು ಇವೆಲ್ಲವನ್ನೂ ಮೀರಿ ತನ್ನ ಅಪ್ಪನ ಕನಸನ್ನು ಇಡೇರಿಸುವುದರಲ್ಲಿ ಸಫಲಳಾಗುತ್ತಾಳಾ? ಎನ್ನುವುದೇ “ನಾನು ನನ್ನ ಕನಸು”.

ಈ ಹೊಸ ಕಥೆಯು ತನ್ನೊಂದಿಗೆ ಹೆಸರಾಂತ ಯುವಕಲಾವಿದರಾದ, ಚೇತನ್‍ಚಂದ್ರ – ಹಲವಾರು ಟಿವಿ ಮತ್ತು ಫಿಲಂಗಳಲ್ಲಿ ನಟಿಸಿದ್ದಾರೆ, ಇನ್ನು ಹೆಸರಾಂತ ಕಲಾವಿದ ಅಜಯ್‍ರಾವ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರ ಜೊತೆಗೆ ಸ್ಪಂದನ ಎಂಬ ಮೈಸೂರಿನ ಬೆಡಗಿ ಅನು ಪಾತ್ರಕ್ಕೆ ಅಮೋಘವಾಗಿ ಜೀವ ತುಂಬಿದ್ದಾರೆ. ಈ ಹೊಸ ಚಿಗುರಿನ ಜೊತೆಗೆ ಹಳೆ ಬೇರುಗಳಾದ ನಿಶಿತಾ ಗೌಡ ಮತ್ತು ಆರತಿಕುಲ್ಕರ್ಣಿ ಬೆನ್ನೆಲಬಾಗಿ ನಿಂತ್ತಿದ್ದಾರೆ.

“ನಾನು ನನ್ನ ಕನಸು” ಉದಯಟಿವಿಯಲ್ಲಿ ಸೋಮ – ಶನಿ ರಾತ್ರಿ 8 ಕ್ಕೆ ಪ್ರಸಾರವಾಗುತ್ತದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com