ರಿಯಾಲಿಟಿ ಶೋ ಸುತ್ತ ಮೈಲಾಪುರ

ಕನ್ನಡ ಚಿತ್ರರಂಗದಲ್ಲಿ ಈಗ ಸಾಕಷ್ಟು ಹೊಸ ಅಲೆಯ ಚಲನ ಚಿತ್ರಗಳು ನಿರ್ಮಾಣವಾಗುತ್ತಿವೆ. ಅಂಥಾ ಚಿತ್ರಗಳ ಸಾಲಿಗೆ ಹೊಸದಾಗಿ ಮೈಲಾಪುರ ಎನ್ನುವ ಸಿನಿಮಾ ಕೂಡ ಸೇರಿದೆ. ಫಣೀಶ್ ಭಾರದ್ವಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಥಿಯೇಟರಿನಲ್ಲಿ ನೆರವೇರಿತು, ಅಂದು ಮಹಿಳಾ ದಿನಾಚರಣೆಯಾದ್ದರಿಂದ ಮಹಿಳೆಯರೇ ಸಮಾರಂಭದ ಕೇಂದ್ರಬಿಂದುವಾಗಿದ್ದರು.