‘ಮುತ್ತು ಕುಮಾರ’ ಧ್ವನಿಸುರುಳಿ ಬಿಡುಗಡೆ

Published on

350 Views

‘ಸೈಕೊ’ ಖ್ಯಾತಿಯ ಧನುಶ್ ನಟನೆಯ ಚಿತ್ರ ‘ಮುತ್ತು ಕುಮಾರ’ದ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ‘ಮುತ್ತುಕುಮಾರ’ ಚಿತ್ರತಂಡ ಭಾಗವಹಿಸಿತು.

ರಾಜ್ ಕುಮಾರ್ ಅಭಿಮಾನಿಯಾಗಿರುವ ನಿರ್ದೇಶಕ ರವಿ ಸಾಗರ್ ಈ ಚಿತ್ರಕ್ಕೆ ‘ಮುತ್ತುಕುಮಾರ’ ಎಂದು ಹೆಸರಿಟ್ಟರು. ‘ಮುತ್ತುಕುಮಾರ’ ಚಿತ್ರದಲ್ಲಿ ತಂದೆ ಮಗನ ಸೆಂಟಿಮೆಂಟ್ ಇದ್ದು, ಚಿತ್ರದಲ್ಲಿ ಮುತ್ತುಕುಮಾರನಾಗಿ ಧನುಶ್ ಕಾಣಿಸಿಕೊಳ್ಳಲಿದ್ದು, ಧನುಶ್ ಗೆ ಜೋಡಿಯಾಗಿ ಸಂಚಿತಾ ಪಡುಕೋಣೆ ನಟಿಸಿದ್ದಾರೆ.
ನಾಯಕಿಗೆ ಇಡೀ ಹಳ್ಳಿಯನ್ನು ಆರ್ಗಾನಿಕ್ ಆಗಿ ಇರಿಸಬೇಕು ಎನ್ನುವುದೇ ಆಸೆ. ಆ ಪ್ರಯತ್ನದಲ್ಲಿ ನಾಯಕ ಏನು ಮಾಡುತ್ತಾನೆ ಎನ್ನುವುದೇ ಚಿತ್ರದ ಸಾರಾಂಶ.

ಈಗಾಗಲೇ ತೆಲುಗಿನಲ್ಲಿ ಒಂದು ಚಿತ್ರಕ್ಕೆ ಸಂಗೀತ ನೀಡಿರುವ
ಕಿರಣ್ ಶಂಕರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದು ಹಳ್ಳಿಯಲ್ಲಿ ನಡೆಯುವ ಕತೆ ಆಗಿದ್ದು, ಜಾನಪದ ಶೈಲಿಯಲ್ಲಿ ಗೀತೆಗಳನ್ನು ತಯಾರು ಮಾಡಲಾಗಿದೆ. ಖವಾಲಿ, ಸೂಫಿ ಮಿಕ್ಸ್ ‌ಮಾದರಿಯ ಹಾಡುಗಳಿರುವುದಾಗಿ ಕಿರಣ್ ಶಂಕರ್ ಹೇಳಿದರು.

ಚಿತ್ರದ ನಾಯಕ ಧನುಶ್ ಮಾತನಾಡಿ ಇದರ ಸಬ್ಜೆಕ್ಟ್ ತುಂಬ ಚೆನ್ನಾಗಿದ್ದ ಕಾರಣ ಆಸಕ್ತಿಯಿಂದ ಅಭಿನಯಿಸಿರುವುದಾಗಿ ಹೇಳಿದರು. ತಮಗೆ ಇಂಥ ಪಾತ್ರ ದೊರಕಿರುವುದು ಖುಷಿ ತಂದಿದೆ ಎಂದರು. ಸಂಚಿತಾ ಪಡುಕೋಣೆ ಮಾತನಾಡಿ ಸತ್ಯಹರಿಶ್ಚಂದ್ರ ಅದ್ಮೇಲೆ ಕನ್ನಡದಲ್ಲಿ ನನ್ನ ಕಂಬ್ಯಾಕ್ ಎಂದರು. ಸಂಜನಾ ಗಲ್ರಾನಿಯವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಛಾಯಾಗ್ರಹಕ ಮಹೇಶ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಲಹರಿ ಸಂಸ್ಥೆಯು ಆಡಿಯೋ ಹಕ್ಕನ್ನು ಪಡೆದಿದ್ದು, ರಾಘವೇಂದ್ರ ರಾಜಕುಮಾರ್ ಮತ್ತು ನಂದ ಕಿಶೋರ್ ಆಡಿಯೋ ಬಿಡುಗಡೆಗೊಳಿಸಿ‌ ಚಿತ್ರತಂಡಕ್ಕೆ ಶುಭ ಕೋರಿದರು.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com