ಚಾಲೆಂಜಿಂಗ್ ಸ್ಟಾರ್ ಗೆ ಚಾಲೆಂಜ್ ಹಾಕಿದ ರೋರಿಂಗ್ ಸ್ಟಾರ್!!

Published on

303 Views

‘ಹಮ್ ಫಿಟ್ ತೊ ಇಂಡಿಯಾ ಫಿಟ್’ ಅಭಿಯಾನಕ್ಕೆ ಕನ್ನಡ ಸಿನಿಮಾರಂಗದಿಂದ ಭರ್ಜರಿ ಸಹಕಾರ ವ್ಯಕ್ತವಾಗಿದೆ.ಸುದೀಪ್, ಯಶ್ ಅವರಿಗೆ ಚಾಲೆಂಜ್ ಹಾಕಿದ್ರೆ ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ ಹಾಗೂ ಶ್ರೀ ಮುರಳಿ ಅವರಿಗೆ ಚಾಲೆಂಜ್ ಸ್ವೀಕರಿಸುವಂತೆ ತಿಳಿಸಿದ್ದರು. ಸದ್ಯ ಶ್ರೀ ಮುರಳಿ ಪವರ್ ಸ್ಟಾರ್ ಹಾಕಿದ್ದ ಚಾಲೆಂಜ್ ನಲ್ಲಿ ಗೆದ್ದು ದರ್ಶನ್ ಅವರಿಗೆ ಹಮ್ ಫಿಟ್ ತೊ ಇಂಡಿಯಾ ಫಿಟ್ ಚಾಲೆಂಜ್ ಹಾಕಿದ್ದಾರೆ. ಶ್ರೀ ಮುರಳಿ ಹಾಕಿರುವ ಚಾಲೆಂಜ್ ಅನ್ನು ದರ್ಶನ್ ಸ್ವೀಕರಿಸುತ್ತಾರಾ? ಎನ್ನುವುದು ಈಗ ಅಭಿಮಾನಿಗಳ ತಲೆಯಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.ಒಂದೊ ವೇಳೆ ಚಾಲೆಂಜ್ ಸ್ವೀಕರಿಸಿದರೆ ಅಭಿಮಾನಿಗಳು ಖುಷ್ ಆಗೋದಂತೂ ಗ್ಯಾರಂಟಿ…ಆ ನಂತರ ಇನ್ಯಾರಿಗೆ ಚಾಲೆಂಜ್ ಮಾಡ್ತಾರೋ ಈ ಚಾಲೆಂಜಿಂಗ್ ಸ್ಟಾರ್ ಅನ್ನೋದು ಬಹಳಷ್ಟು ಕ್ಯೂರಿಯಾಸಿಟಿನಾ ಮೂಡಿಸಿದೆ.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com