ಕ್ರಿಸ್ ಮಸ್ ಗೆ ನಿಮ್ಮೂರಿನ ಚಿತ್ರ ಮಂದಿರಗಳಲ್ಲಿ ಮರ್ಡರ್

ರಾಮ್ ಗೋಪಾಲ್ ವರ್ಮಗೆ ನವರಸನ್ ಸಾಥ್
ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಮ್ ಗೋಪಾಲ್ ವರ್ಮ ನೇತೃತ್ವದ, ನಟ್ಟಿ ಕ್ರಾಂತಿ , ನಟ್ಟಿ ಕರುಣ ನಿರ್ಮಾಣದ
ಮರ್ಡರ್ ಚಿತ್ರ ಡಿಸೆಂಬರ್ 24 ರಂದು ನಾಲ್ಕು ಭಾಷೆಗಳಲ್ಲಿ ತೆರೆ ಕಾಣುತ್ತಿದೆ.
ನವರಸನ್ ಅವರು ಮರ್ಡರ್ ಚಿತ್ರವನ್ನು ಕನ್ನಡದಲ್ಲಿ ತಮ್ಮ ಶ್ರೀ ಲಕ್ಷ್ಮೀವೃಷಾದ್ರಿ ಪ್ರೊಡಕ್ಷನ್ಸ್ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ ಹಾಗೂ ಕಾರ್ಯಕಾರಿ ನಿರ್ಮಾಪಕರಾಗೂ ಕಾರ್ಯ ನಿರ್ವಹಿಸಿದ್ದಾರೆ.
ನೈಜಘಟನೆ ಆಧಾರಿತ ಈ ಚಿತ್ರವನ್ನು ಆನಂದ್ ಚಂದ್ರ ನಿರ್ದೇಶಿಸುತ್ತಿದ್ದಾರೆ. ಕ್ರೈಂ ಮಿಸ್ಟರಿ ಆಧಾರಿತ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ.
ಡಿ.ಎಸ್.ಆರ್ ಸಂಗೀತ ನಿರ್ದೇಶನ, ಜಗದೀಶ್ ಚೀಕಟಿ ಛಾಯಾಗ್ರಹಣ ಹಾಗೂ ಶ್ರೀ ಕಾಂತ್ ಪಟ್ನಾಯಕ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀಕಾಂತ್ ಐಯ್ಯಂಗಾರ್, ಸಾಹಿತಿ, ಗಾಯತ್ರಿ ಭಾರ್ಗವಿ ಮುಂತಾದವರಿದ್ದಾರೆ.