ಮುಖ್ಯಮಂತ್ರಿ ಕಳ್ದೊದ್ನಪ್ಪೊ | Mukyamantri Kaldodonappo ಶುಕ್ರವಾರ ಬಿಡುಗಡೆ

Published on

427 Views

ಬಾಳೆ ಎಲೆ ಭದ್ರಯ್ಯ ಅವರ ಮಗ ಶಿವಕುಮಾರ್ ಭದ್ರಯ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ಚಿತ್ರ ಸಮಾಜದಲ್ಲಿ ಒಂದು ವಿಚಿತ್ರ ಪ್ರಸಂಗದ ಕುರಿತು ಹಾಗೂ ರಾಜಕೀಯ ವಿಡಂಭನೆ ಸಹ ಒಳಗೊಂಡಿದ್ದು ಕಣ್ಣು ತೆರೆಸುವ ಪ್ರಯತ್ನ ಈ `ಮುಖ್ಯಮಂತ್ರಿ ಕಳ್ದೊದ್ನಪ್ಪೊ | Mukyamantri Kaldodonappo’. ಕುರುಡು ದೇಶ ಅನಾಥ ರಾಜ್ಯ ಎಂದು ಸಹ ಶೀರ್ಷಿಕೆ ಕೆಳಗೆ ಹೇಳಲಾಗಿದೆ. ಇದು ಶ್ರೀ ಆರ್ ವಿ ಭದ್ರಯ್ಯ ಬಾಳೆ ಎಲೆ ಪೆÇ್ರಡಕ್ಷನ್ ಅಡಿಯಲ್ಲಿ ತಯಾರಾಗಿರುವ ಚಿತ್ರ.
ಇಲ್ಲಿ ನಿರ್ದೇಶಕರು ವ್ಯವಸ್ಥೆಯ ಸಂದಿಗ್ದ ಸ್ಥಿತಿಯನ್ನು ವಿವರಿಸಿದ್ದಾರೆ. ಹಿರಿಯ ನಟ ಬಾಬು ಹಿರಣ್ಣಯ್ಯ ಮುಖ್ಯಮಂತ್ರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಭರತ್ ಭದ್ರಯ್ಯ ಚಿತ್ರದ ಕಥಾ ನಾಯಕ. ಅಮೂಲ್ಯ ರೈ ಕಥಾ ನಾಯಕಿ. ಶಿವಕುಮಾರ್ ಚಿತ್ರದಲ್ಲಿ ಹೋರಾಟದ ಒಂದು ಘಟ್ಟದಲ್ಲಿ ಮುಖ್ಯಮಂತ್ರಿ ಹುಡುಕಿ ಕೊಡಿ ಎಂದು ಆಗ್ರಹಿಸುತ್ತಾರೆ.
ನಯನ್ ವಿ ಕೆ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಡಾ ವಿ ನಾಗೇಂದ್ರ ಪ್ರಸಾದ್, ಶಿವಕುಮಾರ್ ಭದ್ರಯ್ಯ, ಮನು ಕವಿ ಗೀತೆಗಳನ್ನು ರಚಿಸಿದ್ದಾರೆ. ಹರೀಶ್ ಅವರ ಕ್ಯಾಮರಾ ಕೈ ಚಾಲಕ ಇದೆ, ವಿಷ್ಣು ಆಚಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ಸ್ಟಾರ್ ನಾಗಿ, ರಾಜ್ ದೇವ್ ನೃತ್ಯ, ಹಿನ್ನಲೆ ಸಂಗೀತ ಕಾರ್ತಿಕ್ ವೆಂಕಟೇಶ್, ಸಂಕಲನ ಆನಂದ್ ಪವನ್.

Copyright ©2026 . All Rights Reserved. privacy | terms Whatsapp: 9538193653 Email: hello@flixoye.com